ಕಾಸರಗೋಡು: ನೂತನವಾಗಿ ಆರಂಭಿಸಲಾಗಿರುವ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾನ್ಫಿಡೆನ್ಶಿಯಲ್ ಅಸಿಸ್ಟೆಂಟ್ ಗ್ರೇಡ್ (ಒಂದು), ಕಂಪ್ಯೂಟರ್ ಅಸಿಸ್ಟೆಂಟ್ ಯಾ ಎಲ್ ಡಿ ಟೈಪಿಸ್ಟ್ (ಒಂದು) ಮತ್ತು ಆಫೀಸ್ ಅಟೆಂಡೆಂಟ್ ಯಾ ಪ್ಯೂನ್ (ಇಬ್ಬರು) ಹುದ್ದೆಗಳಿಗೆ ನಿವೃತ್ತ ನ್ಯಾಯಾಲಯದ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಒಟ್ಟು 179ದಿವಸಗಳ ಕೆಲಸ ಲಭ್ಯವಾಗಲಿದೆ. 62 ವಷ್ ಪ್ರಾಯಮಿತಿಯಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ವಯಸ್ಸು, ವಿದ್ಯಾರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ದೃಢೀಕೃತ ಪ್ರತಿಗಳೊಂದಿಗೆ ಏಪ್ರಿಲ್ 30ರ ಒಳಗಾಗಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಕಾಸರಗೋಡು-671123 ಎಂಬ ವಿಳಾಸಕ್ಕೆ ಏ.30 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಕವರ್‍ನ ಮೇಲ್ಭಾಗದಲ್ಲಿ 'ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ' ಎಂದು ಬರೆಯಬೇಕು. ಅರ್ಜಿಗಳನ್ನು ವೈಯಕ್ತಿಕವಾಗಿ ಮತ್ತು ಮೇಲ್ ಮೂಲಕ ಸ್ವೀಕರಿಸಲಾಗುತ್ತದೆ. ನಿಗದಿತ ಸಮಯದ ನಂತರ ಕಳುಹಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.




