ತಿರುವನಂತಪುರಂ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ರಾಜೀನಾಮೆ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ. ಅರ್ಜಿಯನ್ನು ಈಗಿನ ಮುಖ್ಯ ಕಾರ್ಯದರ್ಶಿ ತಿರಸ್ಕರಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣ ತನಿಖೆ ಮುಂದುವರಿದಿರುವುದರಿಂದ ಸ್ವ ನಿವೃತ್ತಿಗೆ ಅವಕಾಶ ನೀಡಲಾಗದು ಎಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ವಾರದ ಹಿಂದೆ ಶಿವಶಂಕರ್ ಅವರು ಮುಖ್ಯಮಂತ್ರಿಯನ್ನು ಖುದ್ದು ಭೇಟಿಯಾಗಿ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಸೇವಾ ಅವಧಿಯು ಮುಂದಿನ ಜನವರಿ 2023 ರವರೆಗೆ ಇದ್ದಗ್ಯೂ ಅರ್ಜಿಯನ್ನು ಸಲ್ಲಿಸಲಾಗಿದೆ.
ನಿನ್ನೆ ಸಚಿವ ಸಂಪುಟದಲ್ಲಿ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಅವರಿಗೆ ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಹಿಂದೆ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರನ್ನು ಅಮಾನತು ಮಾಡಲಾಗಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಜತೆಗಿನ ನಂಟು ಬಹಿರಂಗವಾದ ಹಿನ್ನೆಲೆಯಲ್ಲಿ ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ತನಿಖೆಯಲ್ಲಿ ಶಿವಶಂಕರ್ ಆರೋಪಿಯೆಂದು ಕಂಡುಬಂತು. ಅವರು ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತು ಲೈಫ್ ಮಿಷನ್ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಶಿವಶಂಕರ್ ಅವರನ್ನು ಇಡಿ ಮತ್ತು ಕಸ್ಟಮ್ಸ್ ಬಂಧಿಸಿ 98 ದಿನ ಜೈಲಿನಲ್ಲಿರಿಸಿತ್ತು.
ಆ ಬಳಿಕ ಕಳೆದ ಜನವರಿ 2022 ರಲ್ಲಿ ಸೇವೆಗೆ ಮರಳಿದರು. ಅವರನ್ನು ಮತ್ತೆ ಸೇವೆಗೆ ಕರೆತರಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.




