ನವದೆಹಲಿ: ಸ್ವಾತಂತ್ರ್ಯಾನಂತರದ ಎಲ್ಲ ಪ್ರಧಾನ ಮಂತ್ರಿಗಳಿಗೆ ಗೌರವ ಸಲ್ಲಿಸುವ ಮತ್ತು ಅವರ ಸ್ಮರಣಾರ್ಥ ಅಪರೂಪದ ವಸ್ತುಗಳ ಮ್ಯೂಸಿಯಂ 'ಪ್ರಧಾನ್‌ಮಂತ್ರಿ ಸಂಗ್ರಹಾಲಯ'ವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು.
0
samarasasudhi
ಏಪ್ರಿಲ್ 14, 2022
ನವದೆಹಲಿ: ಸ್ವಾತಂತ್ರ್ಯಾನಂತರದ ಎಲ್ಲ ಪ್ರಧಾನ ಮಂತ್ರಿಗಳಿಗೆ ಗೌರವ ಸಲ್ಲಿಸುವ ಮತ್ತು ಅವರ ಸ್ಮರಣಾರ್ಥ ಅಪರೂಪದ ವಸ್ತುಗಳ ಮ್ಯೂಸಿಯಂ 'ಪ್ರಧಾನ್‌ಮಂತ್ರಿ ಸಂಗ್ರಹಾಲಯ'ವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು.
ಸ್ವಾತಂತ್ರ್ಯ ದೊರೆತ ಬಳಿಕ ದೇಶದ ಬೆಳವಣಿಗೆಗೆ ವಿವಿಧ ರೀತಿಯ ಕೊಡುಗೆ ನೀಡಿರುವ ಪ್ರಧಾನಿಗಳ ಕುರಿತು ಈ ಸಂಗ್ರಹಾಲಯದಲ್ಲಿ ಮಹತ್ವದ ಮಾಹಿತಿ ದೊರೆಯಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದೆ.
ಉದ್ಘಾಟನೆಗೂ ಮುನ್ನ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಗ್ರಹಾಲಯ ವೀಕ್ಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಜನಾಂಗಕ್ಕೆ ದೇಶವನ್ನಾಳಿದ ಎಲ್ಲ ಪ್ರಧಾನಿಗಳ ನಾಯಕತ್ವ, ಕಾರ್ಯಯೋಜನೆ ಮತ್ತು ದೂರದೃಷ್ಟಿಯ ಪರಿಚಯವನ್ನು ನೂತನ ಸಂಗ್ರಹಾಲಯ ಮಾಡಿಕೊಡಲಿದೆ.