HEALTH TIPS

ಕುಂಬಳೆ ಸಿಎಚ್ ಸಿಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ

            ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮಗಳು ಗಮನ ಸೆಳೆದವು. ವಿಶ್ವ ಆರೋಗ್ಯ ದಿನಾಚರಣೆಯನ್ನು ಡಾ.ಕೆ.ಸುಬ್ಬಗಟ್ಟಿ ಉದ್ಘಾಟಿಸಿದರು. ಆರೋಗ್ಯ ವಿಚಾರ ಸಂಕಿರಣಗಳು, ಭೂಮಿಯನ್ನು ರಕ್ಷಿಸುವ ಪ್ರತಿಜ್ಞೆ, ತೋಟಗಾರಿಕೆ ಮತ್ತು ಜೈವಿಕ ಅನಿಲ ಸಂರಕ್ಷಣೆಗೆ ಸಲಹೆಗಳನ್ನು ನೀಡಿದರು. ಪಿಎಚ್‍ಸಿ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತರು ಸಿಎಚ್‍ಸಿಯಲ್ಲಿ ಉದ್ಯಾನವನ್ನು ರಕ್ಷಿಸಿ ಹೊಸ ಗಿಡಗಳನ್ನು ನೆಟ್ಟರು. ಈ ವರ್ಷದ ವಿಶ್ವ ಆರೋಗ್ಯ ದಿನದ ಸಂದೇಶ ನಮ್ಮ ಭೂಮಿ, ನಮ್ಮ ಆರೋಗ್ಯ ಎಂದಾಗಿದೆ. ಈ ನಿಟ್ಟಿನಲ್ಲಿ ಪರಿಸರ ಶುದ್ದೀಕರಣಕ್ಕೆ ತುರ್ತು ಗಮನ ನೀಡಲು ಸಮರೋಪಾದಿಯ ಚಟುವಟಿಕೆಗಳಿಗೆ ರೂಪು ನೀಡಲು ತೀರ್ಮಾನಿಸಲಾಯಿತು.


              ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಕ ಎನ್.ಎ.ಗನ್ನಿಮೋಳ್ ಸ್ವಾಗತಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್ ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಚ್‍ಎನ್ ಮೇಲ್ವಿಚಾರಕಿ ಎಲಿಜಬೆತ್ ಅನು ಮೂತ್ತಿಲ್, ಹಿರಿಯ ಶುಶ್ರೂಷಕ ಅಧಿಕಾರಿ ಎಲ್.ಸುಧಾ, ವಿ.ಕುಂಞಮಿ, ಹಿರಿಯ ಗುಮಾಸ್ತ ಕೆ. ರವಿಕುಮಾರ್ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries