HEALTH TIPS

ಭಾರತ ಬಿಟ್ಟು ವಿದೇಶಕ್ಕೆ ವಲಸೆ ಹೋಗುವ ಪ್ರತೀ ಮೂವರಲ್ಲಿ ಇಬ್ಬರು ಅತ್ಯುನ್ನತ ಶಿಕ್ಷಣ ಪಡೆದವರು

                ನವದೆಹಲಿ:ಭಾರತವು ವಿಶ್ವದಲ್ಲಿ ವಲಸಿಗರ ಅತ್ಯಂತ ದೊಡ್ಡ ಮೂಲವಾಗಿದೆ,ಇದೇ ವೇಳೆ ವಲಸಿಗರ ಶೈಕ್ಷಣಿಕ ಮಟ್ಟದಲ್ಲಿಯೂ ಅದು ಉನ್ನತ ಸ್ಥಾನದಲ್ಲಿದೆ. ಇದೇ ಸಮಸ್ಯೆಯಾಗಿದ್ದು,ಏಕೆ ಎನ್ನುವುದು ಇಲ್ಲಿದೆ...

             ಭಾರತದಿಂದ ವಿದೇಶಗಳಿಗೆ ವಲಸೆ ಹೋಗುವವರಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಜನರು ಶೈಕ್ಷಣಿಕ ಅಥವಾ ವೃತ್ತಿಪರ ತರಬೇತಿಯನ್ನು ಹೊಂದಿರುವ,ಅತ್ಯುನ್ನತ ಶಿಕ್ಷಣವನ್ನು ಪಡೆದಿರುವಂತೆ ಕಾಣುತ್ತಿದೆ.

          ಆರ್ಗನೈಸೇಷನ್ ಫಾರ್ ಇಕಾನಮಿಕ್ ಕೋಆಪರೇಷನ್ ಆಯಂಡ್ ಡೆವಲಪ್‌ಮೆಂಟ್ ಪ್ರಕಾರ ಯಾವುದೇ ಇತರ ದೇಶಕ್ಕೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ.

              ಅರ್ಥಶಾಸ್ತ್ರಜ್ಞೆ ಶ್ರುತಿ ರಾಜಗೋಪಾಲನ್ ಹೇಳುವಂತೆ ಭಾರತವು ಈಗಲೂ ಅತಿಯಾದ ನಿಯಂತ್ರಣದಲ್ಲಿದೆ ಹಾಗೂ ತನ್ನ ಅತ್ಯುತ್ತಮ ಮತ್ತು ಅತ್ಯಂತ ಪ್ರತಿಭಾವಂತರಿಗೆ ಅವಕಾಶಗಳನ್ನು ಸೃಷ್ಟಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ವೇಳೆ ದೇಶದಲ್ಲಿ ಅತ್ಯುತ್ತಮ ಮತ್ತು ಪ್ರತಿಭಾವಂತರನ್ನು ಆಯ್ಕೆ ಮಾಡಲಿಕ್ಕಾಗಿ ರೂಪುಗೊಂಡಿರುವ ಶೈಕ್ಷಣಿಕ ವ್ಯವಸ್ಥೆಯಿದೆ ಮತ್ತು ಈ ವಲಸೆಯು ಈ ವ್ಯವಸ್ಥೆಯ ಪರಿಣಾಮವಾಗಿದೆ.

               ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ಪ್ರಕಾರ ಭಾರತದಲ್ಲಿ ಶಿಕ್ಷಣದೊಂದಿಗೆ ನಿರುದ್ಯೋಗ ಮಟ್ಟವೂ ಹೆಚ್ಚುತ್ತಿದೆ. 2021,ಡಿಸೆಂಬರ್‌ನಲ್ಲಿ ಇದ್ದಂತೆ ದೇಶದಲ್ಲಿ ಪ್ರತಿ ಐವರು ಕಾಲೇಜು ಪದವೀಧರರಲ್ಲಿ ಓರ್ವ ನಿರುದ್ಯೋಗಿಯಾಗಿದ್ದ. ಉದ್ಯೋಗಗಳ ಕೊರತೆಯ ಜೊತೆಗೆ ಕೌಶಲ್ಯಗಳು ಉದ್ಯೋಗಾವಕಾಶಕ್ಕೆ ತಾಳೆಯಾಗದ ಮತ್ತು ಭ್ರಷ್ಟಾಚಾರದ ಸಮಸ್ಯೆಗಳೂ ದೇಶದಲ್ಲಿವೆ. ಹೆಚ್ಚುವರಿಯಾಗಿ ಲಿಂಗ ಮತ್ತು ಜಾತಿ ತಾರತಮ್ಯಗಳು ಈಗಲೂ ತೀವ್ರ ಹಾನಿಯನ್ನುಂಟು ಮಾಡುತ್ತಿವೆ. ಪಾಶ್ಚಾತ್ಯ ದೇಶಗಳಲ್ಲಿಯೂ ಈ ಸಮಸ್ಯೆಗಳು ಇವೆಯಾದರೂ ಭಾರತದಲ್ಲಿರುವಷ್ಟು ತೀವ್ರವಾಗಿಲ್ಲ.

ಉತ್ತಮ ವೇತನ ಮತ್ತು ಕೆಲಸದ ಅವಧಿಗಳನ್ನು ಹೊಂದಿರುವ ಉದ್ಯೋಗಾವಕಾಶಗಳಿಂದಾಗಿ ಭಾರತೀಯರು ಗುಂಪುಗುಂಪಾಗಿ ದೇಶವನ್ನು ತೊರೆಯುತ್ತಿದ್ದಾರೆ. ಉದಾಹರಣೆಗೆ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಆರೋಗ್ಯ ರಕ್ಷಣೆ ಮತ್ತು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ಅಧಿಕ ಬೇಡಿಕೆಗಳಿವೆ. ಇದಲ್ಲದೆ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿಯ ವಿವಿಗಳಿಗೆ ಆದಾಯದ ಉತ್ತಮ ಮೂಲವಾಗಿದ್ದಾರೆ. ಶಿಕ್ಷಣದ ಗುಣಮಟ್ಟ ಮಾತ್ರವಲ್ಲ,ಈ ವಿವಿಗಳ ಕ್ಯಾಂಪಸ್‌ಗಳಲ್ಲಿಯ ವೈವಿಧ್ಯತೆ ಮತ್ತು ಸಮಗ್ರ ವ್ಯವಸ್ಥೆ ಕೂಡ ಭಾರತೀಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ.

           ಪದವಿಯ ನಂತರ ವಿದೇಶದಲ್ಲಿಯೇ ಉಳಿಯಲು ಅವಕಾಶವಿರುವುದು ಹೆಚ್ಚಿನ ಆಕರ್ಷಣೆಯಾಗಿದೆ. ಅಮೆರಿಕದಲ್ಲಿಯ ಎಚ್-1ಬಿಯಂತಹ ವ್ಯಾಸಂಗೋತ್ತರ ವೀಸಾಗಳು ಹೆಚ್ಚಾಗಿ ಭಾರತೀಯರಿಗೇ ಲಭಿಸಿವೆ. ಪಾಶ್ಚಾತ್ಯ ದೇಶಗಳು ಸ್ಟಾರ್ಟ್‌ಅಪ್ ಸ್ಥಾಪಕರು ಮತ್ತು ಹೊಸತನದ ಅನ್ವೇಷಕರಿಗಾಗಿ ವರ್ಗಗಳನ್ನೂ ರೂಪಿಸಿವೆ.

              ಹೀಗಾಗಿ ವಿದೇಶಗಳಲ್ಲಿ ಓದುತ್ತಿರುವ ಭಾರತೀಯರ ಸಂಖ್ಯೆ 2019ರಲ್ಲಿದ್ದ 7.7 ಲ.ದಿಂದ 2024ರಲ್ಲಿ 18 ಲ.ಕ್ಕೇರಲು ಸಜ್ಜಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries