ತ್ರಿಶೂರ್: ಐತಿಹಾಸಿಕ ತ್ರಿಶೂರ್ ಪೂರಂ ಸುಡಿಮದ್ದು ಪ್ರದರ್ಶನಕ್ಕೆ ಕೇಂದ್ರ ಏಜೆನ್ಸಿ ಅನುಮತಿ ನೀಡಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಎಎಸ್ ಒ)ನಿಂದ ಸುಡುಮದ್ದು ಪ್ರದರ್ಶನಕ್ಕೆ ಪರವಾನಗಿ ಪಡೆದಿದೆ. ಸುಪ್ರೀಂ ಕೋರ್ಟ್ ನಿಷೇಧಿಸಿರುವ ರಾಸಾಯನಿಕಗಳನ್ನು ಬಳಸದೆ ಪ್ರದರ್ಶನ ನಡೆಸುವಂತೆ ಕೇಂದ್ರ ಸಂಸ್ಥೆ ಆದೇಶಿಸಿದೆ.
ಶಿವಕಾಶಿ ಸ್ಫೋಟಕಗಳ ಉಪ ನಿಯಂತ್ರಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪರವಾನಗಿಯಲ್ಲಿ ತಿಳಿಸಲಾಗಿದೆ. ಜತೆಗೆ ನಕ್ಷತ್ರ ಮಳೆ, ತುರುಸು ಮತ್ತು ಮಾಲೆ ಪಟಾಕಿ ಪ್ರದರ್ಶಿಸಲು ಮಂಜೂರಾಗಿದೆ. ಪ್ರಸಿದ್ಧ ತ್ರಿಶೂರ್ ಪೂರಂ ಸುಡುಮದ್ದು ಪ್ರದರ್ಶನ ಮೇ 11 ರಂದು ಬೆಳಿಗ್ಗೆ ನಡೆಯಲಿದೆ. ಮೇ 8 ರಂದು ಮಾದರಿ ಸುಡುಮದ್ದು ಪ್ರದರ್ಶನ ನಡೆಯಲಿದೆ.
ತಿರುವನಂತಪುರಂನಲ್ಲಿ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಯಮಾನುಸಾರ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ ತ್ರಿಶೂರ್ ಪೂರಂ ನಡೆಸಲು ನಿರ್ಧರಿಸಲಾಗಿದೆ. ಕೊರೋನಾ ನಿರ್ಬಂಧಗಳನ್ನು ತೆರವು ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ಸಮಾರಂಭಗಳೊಂದಿಗೆ ಪೂರಂ ನಡೆಸಲು ನಿರ್ಧರಿಸಲಾಗಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ಕಳೆದ ಎರಡು ವರ್ಷಗಳಿಂದ ಪೂರಂ ನಿಯಮಿತ ಕ್ರಮದಂತೆ ಆಚರಿಸಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಪೂರಂ ನಿಮಿತ್ತ ಸಮಾರಂಭಗಳು ನಡೆದಿದ್ದರೂ ಪೂರ ನಗರಕ್ಕೆ ಪ್ರವೇಶ ನೀಡಿರಲಿಲ್ಲ. ಆದರೆ, ಈ ವರ್ಷ ಪೂರಂ ಪ್ರಿಯರಿಗೆ ಪೂರ ನಗರಕ್ಕೆ ಪ್ರವೇಶ ದೊರೆಯಲಿದೆ. ಈ ಬಾರಿಯ ತ್ರಿಶೂರ್ ಪೂರಂ ಮೇ 10 ರಂದು ಇದೆ.


