ಕೋಝಿಕ್ಕೋಡ್; ಮಾದಕ ವಸ್ತು ಮುಕ್ತ ರಾಜ್ಯವಾಗಿಸುವುದು ನಮ್ಮ ಗುರಿಯಾಗಿದೆ ಎಂದು ಹೈನುಗಾರಿಕೆ ಮತ್ತು ಪಶುಸಂಗೋಪನೆ ಸಚಿವೆ ಜೆ. ಚಿಂಚುರಾಣಿ ಅ|ಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇರಳ ಪೋಲೀಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಸೈಕಲ್ ರ್ಯಾಲಿಗೆ ಸಚಿವರು ಚಾಲನೆ ನೀಡಿದರು.
ಸಮಾಜದಲ್ಲಿ ದುಃಸ್ಥಿತಿ ಬಿತ್ತುತ್ತಿರುವ ನಶೆಯಿಂದ ಯುವಕರನ್ನು ಮುಕ್ತಗೊಳಿಸುವುದು ಸಮಾಜದ ಧ್ಯೇಯವಾಗಿದೆ. ಇದು ಕುಟುಂಬದಿಂದ ಪ್ರಾರಂಭವಾಗಬೇಕು. ಪೋಷಕರು ಇದರಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಬಹುದು. ರಾಜ್ಯದಲ್ಲಿರುವ ಬಾಲ ಪೋಲೀಸರನ್ನು ಶ್ಲಾಘಿಸಿದ ಸಚಿವರು, ಶಾಲಾ-ಕಾಲೇಜುಗಳಲ್ಲಿ ಸ್ಟೂಡೆಂಟ್ ಪೋಲೀಸ್ ಕೆಡೆಟ್‍ಗಳು ಸೇರಿದಂತೆ ಮಾದಕ ದ್ರವ್ಯ ವಿರೋಧಿ ಅಭಿಯಾನಗಳನ್ನು ನಡೆಸಬೇಕು ಎಂದರು.
40 ಪೋಲೀಸರು ಮಾದಕ ದ್ರವ್ಯ ವಿರೋಧಿ ಸಂದೇಶಗಳುಳ್ಳ ಫಲಕಗಳೊಂದಿಗೆ ರ್ಯಾಲಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಪೋಲೀಸ್ ಕಂಟ್ರೋಲ್ ರೂಂನಿಂದ ಆರಂಭವಾದ ರ್ಯಾಲಿಯು ಪುತ್ತಿಯಸ್ಟಂಟ್, ಮಾವೂರು ರಸ್ತೆ, ನಡಕಾವು ಪೋಲೀಸ್ ಠಾಣೆ, ಗಾಂಧಿ ರಸ್ತೆ ಮೂಲಕ ಕಸಬಾ ಪೋಲೀಸ್ ಠಾಣೆಯಲ್ಲಿ ಸಮಾರೋಪÀಗೊಂಡಿತು.
ನಗರ ಪೋಲೀಸ್ ಆಯುಕ್ತ ಎ. ಅಕ್ಬರ್ ಅವರು ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ಹಂಚಿಕೊಂಡರು. ಡಿ.ಸಿ.ಪಿ. ಅಮೋಸ್ ಮಾಮ್ಮನ್, ರಾಜಕೀಯ ಮತ್ತು ಸಾಂಸ್ಕøತಿಕ ಮುಖಂಡರು, ಸ್ವಾಗತ ಸಂಘದ ಅಧ್ಯಕ್ಷ ಇ. ರಾಜೇಶ್, ಸಂಚಾಲಕ ಬಿನುರಾಜ್, ಸಂಘದ ಪದಾಧಿಕಾರಿಗಳು, ಅಚ್ಯುತನ್, ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಐವತ್ತು ಎಸ್.ಪಿ.ಸಿ. ಕೆಡೆಟ್‍ಗಳು ಮತ್ತಿತರರು ಹಾಜರಿದ್ದರು.
ಮೇ 12 ಮತ್ತು 13ರಂದು ಮೆಜೆಸ್ಟಿಕ್ ಸಭಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸೈಕಲ್ ರ್ಯಾಲಿ ಸಮಾರೋಪಗೊಳ್ಳಲಿದೆ.




