ನವದೆಹಲಿ: ಹಲವು ಜಾಗತಿಕ ಟೆಕ್ ಕಂಪನಿಗಳು ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಸಿಐ ತನಿಖೆ ಎದುರಿಸುತ್ತಿದ್ದು, ಅವರ ಸ್ಪರ್ಧಾತ್ಮಕ ಕಾನೂನುಗಳನ್ನುಪರಿಶೀಲಿಸಲು ಸಂಸದೀಯ ಸಮಿತಿ ಗುರುವಾರ ಗೂಗಲ್, ಅಮೆಜಾನ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರರ ಪ್ರತಿನಿಧಿಗಳಿಗೆ ಸಮನ್ಸ್ ನೀಡಲು ನಿರ್ಧರಿಸಿದೆ.
ಈ ವಿಷಯದ ಕುರಿತು ಸಂಸದೀಯ ಸಮಿತಿಯ ಮುಂದಿನ ಸಭೆ ಮೇ 12 ರಂದು ನಡೆಯುವ ಸಾಧ್ಯತೆಯಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ(CCI), ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಮುಂದೆ ವಿಷಯ ಮಂಡಿಸಿದ ನಂತರ ವಿವರವಾಗಿ ಚರ್ಚಿಸಲಾಯಿತು.
ದೊಡ್ಡ ಟೆಕ್ ಕಂಪನಿಗಳ ಪೈಪೋಟಿ-ವಿರೋಧಿ ಅಭ್ಯಾಸಗಳನ್ನು ಪರಿಣಾಮಕಾರಿಯಾಗಿ ಎದುರಿಸಲು 'ಡಿಜಿಟಲ್ ಮಾರುಕಟ್ಟೆಗಳು ಮತ್ತು ಡೇಟಾ ಘಟಕ'ವನ್ನು ಸ್ಥಾಪಿಸುವುದಾಗಿ ಸಿಸಿಐ ಸಂಸದೀಯ ಸಮಿತಿಗೆ ತಿಳಿಸಿದೆ. ಅಲ್ಲದೆ CCI ಕಾಯಿದೆಗೆ ತಿದ್ದುಪಡಿ ಮಾಡುವ ಅಗತ್ಯ ಇದೆ ಎಂದು ಹೇಳಿದೆ.
ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ತಮಗೆ ಬೇಕಾದ ಮಾರಾಟಗಾರರನ್ನು ಉತ್ತೇಜಿಸುವುದು, ಕೆಲವು ಮಾರಾಟಗಾರರ ವಸ್ತುಗಳಿಗೆ ಆದ್ಯತೆ ನೀಡುವಂತಹ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳನ್ನು ಅನುಸರಿಸುತ್ತಿವೆ ಎಂಬ ಆರೋಪಗಳನ್ನು ಎದುರಿಸುತ್ತಿವೆ.

.jpg)
