ಕುಂಬಳೆ : ವಿಧವೆಯ ಕುಟುಂಬವೊಂದಕ್ಕೆ ಶೌಚಾಲಯವನ್ನು ನಿರ್ಮಿಸಿಕೊಟ್ಟು ಕಿದೂರು ಕುಂಟಂಗೇರಡ್ಕದ ಎಸ್.ಕೆ.ಪಿ.ಫ್ರೆಂಡ್ಸ್ ಕ್ಲಬ್ ಮಾನವೀಯತೆ ಮೆರೆದಿದೆ.
ದೇವಕಿ ಎಂಬವರ ಕುಟುಂಬ ಸರ್ಕಾರದಿಂದ ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ಪಡೆದರೂ ಮಧ್ಯವರ್ತಿಗಳ ದಬ್ಬಾಳಿಕೆಯಿಂದ ಕೆಲಸ ಪೂರ್ತಿಮಾಡದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಕ್ಲಬ್ ಸದಸ್ಯರು ಹಾಗೂ ಊರವರು ಸೇರಿಕೊಂಡು ಶೌಚಾಲಯದ ಕೆಲಸ ಪೂರ್ತಿಗೊಳಿಸಿ ಇದೀಗ ಅದನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ನಡೆದ ಕಿರು ಸಮಾರಂಭದಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ರವಿರಾಜ್, ಎಸ್.ಕೆ.ಪಿ.ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಸಂದೇಶ್, ಕಾರ್ಯದರ್ಶಿ ಮಂಜುನಾಥ್, ಕಾಮಗಾರಿ ಮೇಲುಸ್ತುವಾರಿ ವಹಿಸಕೊಂಡ ದಿನೇಶ್ ಹಾಗೂ ನಾಗರಿಕರು ಸೇರಿಕೊಂಡು ಶೌಚಾಲಯವನ್ನು ಉದ್ಘಾಟಿಸಿದರು. ಅನೀಶ್ ಸ್ವಾಗತಿಸಿ, ಹರೀಶ್ ವಂದಿಸಿದರು. ರಾಜು ಕಿದೂರು ಕಾರ್ಯಕ್ರಮ ನಿರೂಪಿಸಿದರು.




.jpg)
