ಪೆರ್ಲ: ಪೆರ್ಲ ಎಸ್ ಎನ್ ಎಲ್ ಪಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಎಲ್ಲರಿಂದಲೂ ಪ್ರಶಂಸೆಗೆ ಕಾರಣವಾಗಿದೆ.
ಕೇರಳ ರಾಜ್ಯ ಶಿಕ್ಷಣ ಇಲಾಖೆಯ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ಕಾರ್ತಿಕ್ ಶಿರಂತ್ತಡ್ಕ, ಅನಘ ಪೆರ್ಲ, ನಿಶಿತ್ ಅರೆಕ್ಕಾಡಿ ಕಾಟುಕುಕ್ಕೆ, ಹರ್ಷಿತ್ ಬಣ್ಪುತ್ತಡ್ಕ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡು ಸ್ಕಾಲರ್ಶಿಪ್ ಗೆ ಆಯ್ಕೆಗೊಂಡಿದ್ದಾರೆ. ಎಳೆವೆಯಲ್ಲೇ ಇಂತಹ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪಿಟಿಎ, ಎಂಪಿಟಿಎ ಅಧ್ಯಾಪಕ ವೃಂದ ನಾಡಿನ ಶಿಕ್ಷಣ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಶಿಕ್ಷಕರ ಮತ್ತು ಶಾಲಾ ವಿದ್ಯಾರ್ಥಿಗಳ ಹೆತ್ತವರ ಸಂಘಟಿತ ಶ್ರಮ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಿಂದ ಈ ಸಾಧನೆ ಮಾಡಲಾಗಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಇಂತಹ ಸಾಧನೆಯಿಂದ ನಮ್ಮ ಅಧ್ಯಾಪಕ ತಂಡ ಇನ್ನಷ್ಟು ಕ್ರಿಯಾತ್ಮಕವಾಗಿರುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳ ಪ್ರತಿಭೆಗಳಿಗೆ ವೇದಿಕೆಯಾಗಿಸಿ ಎಳೆವೆಯಲ್ಲೇ ಮಕ್ಕಳನ್ನು ಸೃಜನಾತ್ಮಕವಾಗಿ ಬೆಳೆಸುವುದೇ ನಮ್ಮ ಗುರಿ ' ಎಂದು ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಎಲ್ಲರನ್ನು ಪ್ರಶಂಸಿದ್ದಾರೆ.





