ಕಾಸರಗೋಡು: ಕಾಞಂಗಾಡು ನಗರಸಭೆಯ ಹಸಿರು ಕ್ರಿಯಾಸೇನೆಯ ಚಟುವಟಿಕೆ ವಿಪುಲಗೊಳಿಸುವ ನಿಟ್ಟಿನಲ್ಲಿ ನಿರ್ಮಿಸಲದ ಎಂಎಸಿಎಫ್‍ನ ಒಕ್ಕೂಟದ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಹಸಿರು ಕ್ರಿಯಾ ಸೇನೆ ಸದಸ್ಯರಿಗೆ ಸುರಕ್ಷಾ ಪರಿಕರಗಳ ವಿತರಣಾ ಕಾರ್ಯ ನಡೆಯಿತು. ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ ಉದ್ಘಾಟಿಸಿದರು.
ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಅಹಮ್ಮದಲಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ಲಾ ಬಿಲ್ಟೆಕ್, ಉಪಾಧ್ಯಕ್ಷರಾದ ಕೆ.ಲತಾ, ಕೆ.ವಿ.ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ವಿ.ಸುಶೀಲ, ಟಿ.ವಿ.ಸುಜಿತ್ ಕುಮಾರ್, ಎನ್.ಅಶೋಕ್ ಕುಮಾರ್, ಟಿ.ಮುಹಮ್ಮದ್ ಕುಞÂ, ನಗರಸಭೆ ಕಾರ್ಯದರ್ಶಿ ರಾಯ್ ಮ್ಯಾಥ್ಯೂ, ಸಿಡಿಎಸ್ ಅಧ್ಯಕ್ಷರಾದ ಸೂರ್ಯ ಜಾನಕಿ, ಸುಜಿನಿ, ಆರೋಗ್ಯ ಮೇಲ್ವಿಚಾರಕ ಅರುಳ್ ಉಪಸ್ಥಿತರಿದ್ದರು.
ಹಸಿರು ಕ್ರಿಯಾ ಸೇನೆಯ ಕಾರ್ಯಚಟುವಟಿಕೆಗಳ ಫಲವಾಗಿ ನದಿಯ ಅಂಚಿನಲ್ಲಿ ಮತ್ತು ಹಳೇ ಬಸ್ ನಿಲ್ದಾಣದ ಸನಿಹದ ರಸ್ತೆಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸ, ಕಸ ವಿಲೇವಾರಿ ನಡೆಸುವ ಮೂಲಕ ಶುಚಿಗೊಳಿಸಲಾಗಿದ್ದು, ಹಸಿರು ಕ್ರಿಯಾ ಸೇನೆಯ ವ್ಯವಸ್ಥಿತ ಚಟುವಟಿಕೆ ಪರಿಣಾಮ ತ್ಯಾಜ್ಯ ಮುಕ್ತ ನಗರದ ಕನಸೂ ನನಸಾಗಿರುವುದಾಗಿ ಕೆ.ವಿ ಸುಜಾತಾ ತಿಳಿಸಿದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪುಡಿಮಾಡಿ ರಸ್ತೆ ನಿರ್ಮಾಣ ಮತ್ತಿತರ ಕೈಗಾರಿಕೆಗಳಿಗೆ ಹಸ್ತಾಂತರಿಸಲಾಗುತ್ತಿದೆ. ಕ್ಲೀನ್ ಕೇರಳ ಕಂಪನಿಯು ನಗರಸಭೆಯಿಂದ 500 ಟನ್ ಅಜೈವಿಕ ತ್ಯಾಜ್ಯವನ್ನು ಸಂಗ್ರಹಿಸಿದೆ.


