HEALTH TIPS

ಕೇರಳ ಕೇಂದ್ರೀಯ ವಿವಿ ಪ್ರಾಧ್ಯಾಪಕಗೆ ಲಂಡನ್ ಫೆಲೋಶಿಪ್

             ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಇಫ್ತಿಕರ್ ಅಹ್ಮದ್ ಅವರಿಗೆ ಲಂಡನ್ ವಿಶ್ವವಿದ್ಯಾಲಯ ಆಯೋಜಿಸಿದ ಇಂಟರ್‍ನ್ಯಾಶನಲ್ ಸಮ್ಮರ್ ಪ್ರೋಗ್ರಾಮ್ ಫೆಲೋಶಿಪ್ ನೀಡಲಾಗಿದೆ. 

           ವಿಶ್ವ ವಿದ್ಯಾಲಯದ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಸ್ಟಡೀಸ್‍ನಿಂದ ಜುಲೈ 9ರಿಂದ 17ರ ವರೆಗೆ ನಡೆಯಲಿರುವ ಎಲಿಯಟ್ ಇಂಟರ್‍ನ್ಯಾಷನಲ್ ಸಮ್ಮರ್ ಸ್ಕೂಲ್‍ನಲ್ಲಿ ಭಾಗವಹಿಸಲು ಹಾಗೂ ವಿವಿಧ ಶೈಕ್ಷಣಿಕ ಮತ್ತು ಸಂಶೋಧನೆಗೆ ಹಾಜರಾಗಿ ಸೆಷನ್ಸ್‍ನಲ್ಲಿ ಪ್ರತಿನಿಧಿಯಾಗಲು ಫೆಲೋಶಿಪ್ ನೀಡಲಾಗಿದೆ. ಈ ವರ್ಷದ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಎಲಿಯಟ್‍ನ ದಿ ವೇಸ್ಟ್‍ಲ್ಯಾಂಡ್ ಎಂಬ ಕವಿತೆಯನ್ನು ಕೇಂದ್ರೀಕರಿಸಿ ಡಾ. ಇಫ್ತಿಕರ್ ಅಹಮ್ಮದ್ ಸಲ್ಲಿಸಿದ ಪ್ರೋಜೆಕ್ಟ್ ಪರಿಗಣಿಸಿ ಫೆಲೋಶಿಪ್‍ಗೆ ಇವರನ್ನು ಆಯ್ಕೆ ಮಾಡಲಾಗಿದೆ.  ಹತ್ತು ದಿನಗಳ ಸಮ್ಮರ್ ಪ್ರೋಗ್ರಾಮ್  ಕಾರ್ಯಕ್ರಮದಲ್ಲಿ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ವಸತಿ ಹಾಗೂ ಅಧ್ಯಯನ ವೆಚ್ಚದೊಂದಿಗೆ ಎಲ್ಲ ಸವಲತ್ತುಗಳನ್ನೂ ಒಡಗಿಸಿಕೊಡಲಾಗಿದೆ.  ಸಮ್ಮರ್ ಪ್ರೋಗ್ರಾಮ್ ಫೆಲೋಶೀಪ್‍ನಲ್ಲಿ ಹಲವಾರು ಅಂತಾರಾಷ್ಟ್ರೀಯ ಬರಹಗಾರರು ಮತ್ತು ಶೈಕ್ಷಣಿಕ ತಜ್ಞರು ಭಾಗವಹಿಸುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries