ಬೆಂಗಳೂರು: ಪಬ್ ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ತನ್ನ ಕ್ಲಾಸ್ ಮೇಟ್ ಮತ್ತು ಸಹವರ್ತಿ ಆಟಗಾರ ರೈಲ್ವೆ ನಿಲ್ದಾಣದಿಂದ ಹೋಗುವುದನ್ನು ತಡೆಯಲು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಹುಸಿ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಹುಸಿ ಬಾಂಬ್ ಕರೆ ಭೀತಿಯಿಂದ ಅನೇಕ ರೈಲುಗಳ ಸಂಚಾರದಲ್ಲಿ 90 ನಿಮಿಷ ತಡವಾಯಿತು.
ರೈಲ್ವೆ ಮೂಲಗಳ ಪ್ರಕಾರ, ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಮಾರ್ಚ್ 30 ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ರೈಲ್ವೆ ಸಹಾಯವಾಣಿ 139 ಗೆ ಕರೆ ಬಂದಿದೆ. ಕೂಡಲೇ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಸುರಕ್ಷತಾ ಪಡೆ ನಿಲ್ದಾಣದಲ್ಲಿ ಶೋಧ ಕಾರ್ಯ ನಡೆಸಿ, ಇದೊಂದು ಹುಸಿ ಬಾಂಬ್ ಕರೆ ಎಂದು ಸ್ಪಷ್ಪಪಡಿಸಿದೆ.
ಕರೆ ಬಂದಿದ್ದ ಫೋನ್ ಗೆ ಮತ್ತೆ ಹಲವು ಬಾರಿ ಕರೆ ಮಾಡಿದಾಗ ಫೋನ್ ಸ್ವೀಚ್ ಆಫ್ ಆಗಿತ್ತು. ಆದಾಗ್ಯೂ, ಬಾಲಕನ ಕೊನೆಯ ಲೋಕೇಶನ್ ಪತ್ತೆ ಹಚ್ಚಿ, ಯಲಹಂದ ವಿನಾಯಕನಗರದ ಮನೆಯೊಂದರಿಂದ ಬಂದ ಕರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಪಜ್ಬಿ ವಿಡಿಯೋ ಗೇಮ್ ಹುಚ್ಚು ಹಚ್ಚಿಕೊಂಡಿದ್ದ ವಿದ್ಯಾರ್ಥಿ, ತನ್ನ ಫೋಷಕರು ಕೊಡಿಸಿದ ಫೋನ್ ನಿಂದ ಕರೆ ಮಾಡಿದ್ದಾನೆ. ತನ್ನ ಕ್ಲಾಸ್ ಮೇಟ್ ಅಲ್ಲಿಂದ ಹೋಗುವುದನ್ನು ತಡೆಯುವುದು ಆತನ ಪ್ರಮುಖ ಉದ್ದೇಶವಾಗಿತ್ತು.
ಇದರಿಂದಾಗಿ ಯಲಹಂಕದಿಂದ ಹೊರಡಬೇಕಾದ ಎಲ್ಲಾ ರೈಲುಗಳ ಸಂಚಾರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಡವಾಯಿತು. ಮತ್ತೆ ಐದು ಗಂಟೆಯಿಂದ ಎಲ್ಲಾ ರೈಲುಗಳ ಸಂಚಾರವನ್ನು ಪುನರ್ ಆರಂಭಿಸಲಾಯಿತು ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ತಿಳಿಸಿದರು.





