HEALTH TIPS

ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನ ವಾಣಿಜ್ಯ ಹಾರಾಟ ಶುರು..

            ನವದೆಹಲಿ: ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನ ಇಂದಿನಿಂದ ವಾಣಿಜ್ಯ ಹಾರಾಟವನ್ನು ಆರಂಭಿಸಿದ್ದು, ಈಶಾನ್ಯ ರಾಜ್ಯಗಳಿಗೆ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ವೃದ್ಧಿಸುವ ವಾಯುಯಾನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

              ಅರುಣಾಚಲ ಪ್ರದೇಶದ ದೂರದ ಪ್ರದೇಶದ ಐದು ಪಟ್ಟಣಗಳೊಂದಿಗೆ ಅಸ್ಸಾಮ್​ನ ದಿಬ್ರುಘರ್​ಗೆ ಸಂಪರ್ಕ ಕಲ್ಪಿಸುವ ಈ ಮೇಡ್ ಇನ್ ಇಂಡಿಯಾ ಡಾರ್ನಿಯರ್ ವಿಮಾನ 17 ಸೀಟುಗಳನ್ನು ಹೊಂದಿದೆ.

             ನಾಗರಿಕ ವಿಮಾನಯಾನ ಸಚಿವಾಲಯವು ಈಶಾನ್ಯ ರಾಜ್ಯಗಳಿಗೆ ವಾಯಯಾನ ಸಂಪರ್ಕ ಮತ್ತು ವಿಮಾನಯಾನ ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಮಾನ್ಯತೆ ನೀಡಿದ್ದು, ಅದರನ್ವಯ ಈ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ.

             ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ ನಿರ್ಮಿಸಿರುವ ಡಾರ್ನಿಯರ್ ಡು-228 ವಿಮಾನವು ಅಲಯನ್ಸ್ ಏರ್ ಮೂಲಕ ಅಸ್ಸಾಮ್​ನ ದಿಬ್ರುಘರ್​ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಮಧ್ಯೆ ಸಂಚರಿಸಲಿದೆ. ಅದಕ್ಕಾಗಿ ಅಲಯನ್ಸ್ ಏರ್​ಗೆ ಎರಡು ವಿಮಾನಗಳನ್ನು ಒಪ್ಪಂದದ ಮೇರೆಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

           ಡಾರ್ನಿಯರ್ ಮೂಲತಃ ಜರ್ಮನಿ ನಿರ್ಮಿತ ವಿಮಾನವಾಗಿದ್ದು, 1981ರಲ್ಲಿ ಎಚ್​ಎಎಲ್​ ಇದರ ಉತ್ಪಾದನೆ ಪರವಾನಗಿ ಪಡೆದು ಅಸೆಂಬ್ಲ್ ಮಾಡುತ್ತಿತ್ತು. ಕಾನ್ಪುರದಲ್ಲಿ ಅಂಥ 125 ವಿಮಾನಗಳನ್ನು ನಾಗರಿಕ ಹಾಗೂ ಸೇನಾ ಹಾರಾಟಕ್ಕಾಗಿ ಮಾಡಿಕೊಡಲಾಗಿತ್ತು. 2009ರಿಂದ ಸ್ವಿಸ್​ ಏರೋಸ್ಪೇಸ್ ಇಂಜಿನಿಯರಿಂಗ್ ಆಯಂಡ್ ಡಿಫೆನ್ಸ್ ಕಂಪನಿ ಆರ್​​ಯುಎಜಿ ಸುಧಾರಿತ ಡಾರ್ನಿಯರ್ ಡು-228 ನ್ಯೂ ಜನರೇಷನ್​ (ಎನ್​ಜಿ) ಫ್ಯೂಸಲೇಜ್​, ವಿಂಗ್ಸ್ ಮತ್ತು ಟೇಲ್ಸ್​ ಎಚ್​ಎಎಲ್​ನಿಂದ ಪಡೆದು ನಿರ್ಮಿಸುತ್ತಿತ್ತು. ಆದರೆ ಇದೀಗ ವಾಣಿಜ್ಯ ಹಾರಾಟಕ್ಕೆ ಬಿಡಲಾಗಿರುವ ಡಾರ್ನಿಯರ್​ 228 ಎನ್​ಜಿ ಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲ್ಪಟ್ಟಿರುವ ಪ್ರಪ್ರಥಮ ವಿಮಾನವಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries