HEALTH TIPS

ಈ ಎರಡು ನಂಬರ್​ಗಳಿಂದ ಕರೆ-ಮೆಸೇಜ್​ ಬಂದರೆ ಪ್ರತಿಕ್ರಿಯಿಸಬೇಡಿ ಎಂದ ಎಸ್​ಬಿಐ!

          ನವದೆಹಲಿ: ಆನ್​ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಿನೇದಿನೆ ಒಂದಲ್ಲ ಒಂದು ಕಡೆ ಒಂದಲ್ಲ ಒಂದು ರೀತಿಯಲ್ಲಿ ವಂಚಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.

            ಅದರಲ್ಲೂ ಈ ಎರಡು ಮೊಬೈಲ್​ಫೋನ್​ ನಂಬರ್​ಗಳಿಂದ ಕರೆ ಬಂದರೆ ಹುಷಾರು ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಮುನ್ನೆಚ್ಚರಿಕೆಯನ್ನು ನೀಡಿದೆ. ಎಸ್​​ಬಿಐ ಗ್ರಾಹಕರಿಗೆ +91-8294710946 ಮತ್ತು +91-7362951973 ನಂಬರ್​ಗಳಿಂದ ಬಹಳಷ್ಟು ಕರೆ ಹಾಗೂ ಸಂದೇಶಗಳು ಹೋಗುತ್ತಿದ್ದು, ಕೆವೈಸಿ ನೆಪದಲ್ಲಿ ಕೆಲವೊಂದು ಫಿಷಿಂಗ್ ಲಿಂಕ್​ ಕ್ಲಿಕ್ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.

              ಆದರೆ ಬ್ಯಾಂಕ್ ಆ ರೀತಿ ಯಾರಿಗೂ ಕರೆ ಮಾಡಿ ಕೆವೈಸಿ ಇತ್ಯಾದಿ ಕೇಳವುದಿಲ್ಲ. ಮೇಲಿನ ಎರಡು ನಂಬರ್​ಗಳು ಬ್ಯಾಂಕ್​ಗೆ ಸಂಬಂಧಪಟ್ಟವಲ್ಲ ಎಂದು ಸ್ಪಷ್ಟನೆ ನೀಡಿರುವ ಎಸ್​ಬಿಐ, ಆ ನಂಬರ್​ಗಳ ಕರೆ ಮತ್ತು ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬಾರದು ಎಂದು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries