HEALTH TIPS

15-18 ವಯಸ್ಸಿನವರಿಗೆ ಶೇ 80 ರಷ್ಟು ಲಸಿಕೆ ಸಾಧನೆ: ಆರೋಗ್ಯ ಸಚಿವ

            ನವದೆಹಲಿ: 15-18ನೇ ವಯಸ್ಸಿನ ಶೇ 80 ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್‌ ಮಾಂಡವೀಯ ಮಂಗಳವಾರ ಹೇಳಿದರು.

          'ದೇಶದಲ್ಲಿ ಇದುವರೆಗೆ 192.52 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. 15-18 ವಯಸ್ಸಿನವರಿಗೆ ಜನವರಿಯಿಂದ ಲಸಿಕೆ ನೀಡಲು ಆರಂಭಿಸಿ ಇಲ್ಲಿಯ ತನಕ 5.92 ಕೋಟಿ ಮೊದಲ ಡೋಸ್‌, 12-14 ವಯೋಮಾನದವರಿಗೆ ಮಾರ್ಚ್‌ 16ರಿಂದ ಆರಂಭವಾದ ಅಭಿಯಾನದಲ್ಲಿ ಇಲ್ಲಿಯವರೆಗೆ 3.30 ಕೋಟಿ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ಭಾರತ ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ' ಎಂದು ಮಾಂಡವೀಯ ಟ್ವೀಟ್‌ ಮಾಡಿದ್ದಾರೆ.

              ಕಳೆದ ಜನವರಿಯಲ್ಲಿ ದೇಶದಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿತ್ತು. ಎರಡು ವರ್ಷದ ಹಿಂದೆ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಕಳೆದ ಏಪ್ರಿಲ್‌ನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರು ಬೂಸ್ಟರ್‌ ಡೋಸ್‌ ಪಡೆಯಲು ಸರ್ಕಾರ ಅನುಮತಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries