HEALTH TIPS

ಆನೆಗುಂದಿಶ್ರೀ ಪಟ್ಟಾಭಿಷೇಕ: ವರ್ಧಂತ್ಯುತ್ಸವ-8ರಿಂದ ಆನೆಗುಂದಿ ಕ್ರೀಡಾ ಕಲೋತ್ಸವ

                ಕಾಸರಗೋಡು: ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ 12ನೇ ವರ್ಷದವರ್ಧಂತ್ಯುತ್ಸವವು ಮೇ 25ರಂದು ವಿವಿಧವೈದಿಕ ಧಾರ್ಮಿಕ ಸಾಂಸ್ಕøತಿಕಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಅಂಗವಾಗಿ ನಡೆಯುವ ವಸಂತ ವೇದಪಾಠ ಶಿಬಿರವು ಮೇ 8ರಿಂದ 15ರ ತನಕ ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.

                ಕಾರ್ಯಕ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ ಮಹಾಸಂಸ್ಥಾನದ ವ್ಯಾಪ್ತಿಯಲ್ಲಿರುವ ಎಳೆಯರಿಂದ ಹಿರಿಯರ ವರೆಗಿನ ಸಮಾಜ ಬಂಧುಗಳನ್ನುಒಗ್ಗೂಡಿಸುವ ವಿವಿಧ ಸ್ಫರ್ದಾ ಕಾರ್ಯಕ್ರಮಗಳನ್ನು 'ಆನೆಗುಂದಿ ಕ್ರೀಡಾ ಕಲೋತ್ಸವ-2022' ಹೆಸರಲ್ಲಿ ಪ್ರತಿಷ್ಠಾನವು ಆಯೋಜಿಸಿದೆ. ಕಾಸರಗೋಡು ಜಿಲ್ಲೆಯ ಕಾಞಂಗಾಡು,ಮಧೂರು,ಆರಿಕ್ಕಾಡಿ, ಬಂಗ್ರಮಂಜೇಶ್ವರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೋಟೆಕಾರು, ಮಂಗಳೂರು,ಮೂಡಬಿದಿರೆ, ಕಾರ್ಕಳ ಕೊಲಕಾಡಿ, ಕಾಪು, ಕಟಪಾಡಿ, ಬಾರ್ಕೂರು, ಉಪ್ರಳ್ಳಿ, ಭಟ್ಕಳ. ಗೋಕರ್ಣ ಅಲ್ಲದೆ ಬೆಂಗಳೂರು, ಹುಬ್ಬಳ್ಳಿ, ಮತ್ತು ನವಿ ಮುಂಬಯಿಯ ಕಾಳಿಕಾಂಬಾ ದೇವಸ್ಥಾನಗಳ ವಿಶ್ವ ಬ್ರಾಹ್ಮಣ ಸಮಾಜ ಬಾಂಧವರು ಈ ಸ್ಪರ್ಧಾಕಾರ್ಯಕ್ರಮಗಳಲ್ಲಿಭಾಗವಸದ್ದಾರೆ. 

             ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೇ 25ರಂದು ಬಹುಮಾನ  ನೀಡಲಾಗುವುದು. ಪಟ್ಟಾಭಿಷೇಕ ಮಹೋತ್ಸವದ 12ನೇ ವರ್ಷದ ವರ್ಧಂತ್ಯುತ್ಸವದ ಮೇ 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುವುದು. ಮಹಾಸಂಸ್ಥಾನದಲ್ಲಿ ಸಾಮೂಹಿಕ ಚಂಡಿಕಾಯಾಗ. ವಧರ್ಮಸಭೆ ನಡೆಯುವುದು. ಈ ಸಂದರ್ಭ ಸಮಾಜದ ಯುವ ಪ್ರತಿಭೆಗಳಿಗೆ ಗೌರವ ಅಭಿನಂದನೆ. ಕಲಾ ಸಾಹಿತ್ಯ ಸಾಮಾಜಿಕ ಮತ್ತು ವಿಶೇಷ ಕ್ಷೇತ್ರಗಳಲ್ಲಿಗುರುತಿಸಿಕೊಂಡ ಸಮಾಜ ಬಂಧುಗಳಿಗೆ ಆನೆಗುಂದಿಶ್ರೀ ಪ್ರಶಸ್ತಿ ಮತ್ತುಮಹಾಸಂಸ್ಥಾನಕ್ಕೆ ಅನುಪಮ ಸೇವೆ ಸಲ್ಲಿಸಿದ ಸಮಾಜದ ಧುರೀಣರಿಗೆ ಶ್ರೀ ಸರಸ್ವತೀಅನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಇದೇ ಮೊದಲ ಬಾರಿಗೆ ಸಮಾಜ ಬಾಂಧವರ ಪಂಚ ಕುಲಕಸುಬುಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನೂ ಹಮ್ಮಿಕ್ಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries