ನವದೆಹಲಿ: ಮೇ 3ರಂದು ಮಹಾರಾಷ್ಟ್ರದ ಮಸೀದಿಗಳ ಹೊರಗಡೆ ನಡೆಸಲಿರುವ ಹನುಮಾನ್ ಚಾಲೀಸಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಭಜರಂಗ ದಳ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.
0
samarasasudhi
ಮೇ 01, 2022
ನವದೆಹಲಿ: ಮೇ 3ರಂದು ಮಹಾರಾಷ್ಟ್ರದ ಮಸೀದಿಗಳ ಹೊರಗಡೆ ನಡೆಸಲಿರುವ ಹನುಮಾನ್ ಚಾಲೀಸಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಭಜರಂಗ ದಳ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬನ್ಸಾಲ್, 'ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂಬುದು ಸುಳ್ಳು ಹಾಗೂ ಆಧಾರ ರಹಿತ ಸುದ್ದಿ' ಎಂದು ತಿಳಿಸಿದ್ದಾರೆ.
'ವಿಎಚ್‌ಪಿ ಅಥವಾ ಭಜರಂಗದಳ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಅಥವಾ ರಾಜಕೀಯ ಪಕ್ಷದ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಅದರಂತೆಯೇ ಹನುಮಾನ್ ಚಾಲೀಸಾ ಕಾರ್ಯಕ್ರಮಕ್ಕೂ ನಾವು ಬೆಂಬಲ ನೀಡಿಲ್ಲ. ಇವೆಲ್ಲವೂ ಸತ್ಯಕ್ಕೆ ದೂರವಾದ ಮಾತು' ಎಂದು ಪರೋಕ್ಷವಾಗಿ ಎಂಎನ್‌ಎಸ್ ಪಕ್ಷಕ್ಕೆ ಬನ್ಸಾಲ್ ಚಾಟಿ ಬೀಸಿದರು.