ಪಾಲಕ್ಕಾಡ್: ನಾಪತ್ತೆಯಾಗಿರುವ ಅರಣ್ಯ ವೀಕ್ಷಕ ರಾಜನ್ ಅವರ ಕುಟುಂಬವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ. ನಾಪತ್ತೆಯಾಗಿ ಎರಡು ವಾರ ಕಳೆದರೂ ರಾಜನ್ ಅವರನ್ನು ಪತ್ತೆಹಚ್ಚಲಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿಂದೆ, ಕಮ್ಯುನಿಸ್ಟ್ ಭಯೋತ್ಪಾದಕರು ರಾಜನ್ ಅವರನ್ನು ಅಪಹರಿಸುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಬೇಕೆಂದು ಕುಟುಂಬವು ಒತ್ತಾಯಿಸಿತ್ತು.
ಮುಂದಿನ ತಿಂಗಳು 11ರಂದು ರಾಜನ್ ಅವರ ಪುತ್ರಿಯ ವಿವಾಹ ನಡೆಯಲಿದೆ. ಅದಕ್ಕೂ ಮೊದಲು ರಾಜನ್‍ನನ್ನು ಹುಡುಕಬೇಕೆಂದು ಕುಟುಂಬ ಬಯಸಿದೆ. 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ರಾಜನ್ ಗೆ ಕಾಡಾನೆಗಳೆಲ್ಲ ಚಿರಪರಿಚಿತ ಎನ್ನುತ್ತಾರೆ ಕುಟುಂಬದವರು. ತಂದೆ ಕಾಡು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು ಮಗಳೂ ಹೇಳಿದ್ದಳು. ರಾಜನ್ ಪತ್ತೆಗೆ ಪೋಲೀಸರು ಲುಕ್ ಔಟ್ ನೋಟ|ಈಸ್ ಜಾರಿಮಾಡಿದ್ದಾರೆ.
ಇದೇ ವೇಳೆ ರಾಜನ್ ತಮಿಳುನಾಡು ಅರಣ್ಯಕ್ಕೆ ತಲುಪಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ. ತನಿಖಾ ತಂಡವು ತಮಿಳುನಾಡಿನಲ್ಲಿರುವ ರಾಜನ್ ಅವರ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿತ್ತು. ತನಿಖೆಯ ಪ್ರಗತಿ ಪರಿಶೀಲನೆಗೆ ನಾಳೆ ಸಭೆ ಕರೆಯಲಾಗುವುದು. ರಾಜನ್ ಅವರ ಹುಡುಕಾಟವನ್ನು ಇಂದು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ತಿಂಗಳ ಎರಡರಂದು ರಾಜನ್ ವಾಚ್ ಟವರ್ ನಲ್ಲಿ ಕೆಲಸ ಮಾಡುತ್ತಿದ್ದಾಗ ನಾಪತ್ತೆಯಾಗಿದ್ದರು.
ಗೋಪುರದ ಬಳಿ ರಾಜನ್‍ಗೆ ಸೇರಿದ ಬಟ್ಟೆಗಳು ಮತ್ತು ಪಾದರಕ್ಷೆಗಳು ಪತ್ತೆಯಾಗಿವೆ. ನಂತರ ಪ್ರತಿದಿನ ರಾಜನ್ ಗಾಗಿ ತೀವ್ರ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅಗಲಿ ಡಿವೈಎಸ್ಪಿ ನೇತೃತ್ವದಲ್ಲಿ ಹಲವು ತುಕಡಿಗಳು ವಿವಿಧೆಡೆ ಶೋಧ ನಡೆಸಿವೆ. ಅರಣ್ಯ ಇಲಾಖೆ ಪ್ರಕಾರ ಅರಣ್ಯದಲ್ಲಿ ಇನ್ನು ಹುಡುಕಾಡಿ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.




.jpg)
