ಕಾಸರಗೋಡು: ಜಿಲ್ಲೆಯನ್ನು ಮಹಿಳಾ ಸ್ನೇಹಿ ಜಿಲ್ಲೆಯಾಗಿ ಬದಲಾಯಿಸಲು ಪ್ರಸ್ತುತ ಸನ್ನಿವೇಶ ಮತ್ತು ಏನೇ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ ಚರ್ಚಿಸಿ ಜಿಲ್ಲಾ ಪಂಚಾಯಿತಿಯ ಮಹಿಳಾ ಸಭೆ ನಿರ್ಣಯ ಕೈಗೊಂಡಿತು. ಹದಿನಾಲ್ಕನೇ ಪಂಚವಾರ್ಷಿಕ ಯೋಜನೆಯನ್ವಯ ಕಾಸರಗೋಡು ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಮಹಿಳಾ ಸಭೆ ನಡೆಸಲಾಯಿತು. ಜಿಲ್ಲಾ ಜಿಲ್ಲಾಧಿಕಾರಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಯೋಜನೆ ಫೆಸಿಲಿಟರ್ ಎಚ್ ಕೃಷ್ಣ ಮಾರ್ಗಸೂಚಿ ವಿಷದೀಕರಿಸಿದರು. ಜಿಲ್ಲೆಯ ಮಹಿಳೆಯರಿಗೆ ಉದ್ಯೋಗ ಖಾತ್ರಿಪಡಿಸುವುದು, ಮಹಿಳೆಯರಿಗೆ ಬೇಕಾದ ಹೊಸ ಯೋಜನೆಗಳನ್ನು ಆವಿಷ್ಕರಿಸುವುದು ಸಹಿತ ವಿವಿಧ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಗೀತಾಕೃಷ್ಣನ್, ಕೆ.ಶಕುಂತಳ, ಎಸ್ ಎನ್ ಸರಿತಾ, ಜಿಲ್ಲಾ ಮಹಿಳಾ ಸಂರಕ್ಷಣಾಧಿಕಾರಿ ಎಂ ವಿ ಸುನಿತಾ, ಜಿಲ್ಲಾ ಯೋಜನಾಧಿಕಾರಿ ಎ ಎಸ್ ಮಾಯ, ಟೌನ್ ಪ್ಲಾನರ್ ಅಧಿಕಾರಿ ಲಿಲಿಟಿ ಥಾಮಸ್, ಕಾಸರಗೋಡು ಆತ್ಮಾ ಪ್ರೋಜೆಕ್ಟ್ ನಿರ್ದೇಶಕಿ ಟಿ ಸುಶೀಲ, ಎಂಪ್ಲಾಯಿಮೆಂಟ್ ಅಧಿಕಾರಿ ಕೆ ಗೀತಾಕುಮಾರಿ, ವಿ ಟಿ ಕಾತ್ರ್ಯಾಯಿನಿ, ದೇವಿ ರವೀಂದ್ರನ್ ್ರುಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಶಿಮ್ನಾ ಸ್ವಾಗತಿಸಿದರು.





