ಕೊಚ್ಚಿ: ದ್ವೇಷದ ಭಾಷಣ ಮಾಡಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಪಿಸಿ ಜಾರ್ಜ್‍ಗೆ ಬೆಂಬಲ ಸೂಚಿಸಿರುವ ಈಗಿನ ಹೊಸ ವರ್ತಮಾನದ ಮಧ್ಯೆ ಬಿಜೆಪಿಯ ನಾಯಕಿ ಶೋಭಾ ಸುರೇಂದ್ರನ್ ಅವರ ಹಳೆಯ ಭಾಷಣ ವೈರಲ್ ಆಗಿದೆ. ಪಿಸಿ ಜಾರ್ಜ್ ಹೆಸರಿನಲ್ಲಿರುವ ಪಿಸಿ ‘ಕೆಟ್ಟ’ ನಾಚಿಕೆಯಿಲ್ಲದ ನಾಯಕ’ ಎಂದು ಶೋಭಾ ಈ ಹಿಂದೆ ಭಾಷಣಮಾಡಿದ್ದರು. ಜಾರ್ಜ್ ಅವರನ್ನು ಎಲ್ಲರೂ ಹೀಗೆ ಕರೆಯುವ ಪರಿಸ್ಥಿತಿಗೆ ಬರಬಾರದು ಎಂದು ಅ|ಂದು ಶೋಭಾ ಸುರೇಂದ್ರನ್ ಹೇಳಿದ್ದರು.
“ಕೇರಳದಲ್ಲಿ ನಾಚಿಕೆಯಿಲ್ಲದ ನಾಯಕನೊಬ್ಬ ಉಪದೇಶ ಮಾಡುವುದನ್ನು ನಾನು ನೋಡಿದೆ. ಅವರ ಹೆಸರು ಪಿಸಿ ಜಾರ್ಜ್. ಪಿಸಿ ಜಾರ್ಜ್ ಅವರ ಹೆಸರಿನ ಮೊದಲ ಪೂರ್ಣ ರೂಪ ‘ಪರಮ ಹುಚ್ಚ್ಟ’, ಸಮುದಾಯದ ಸಂಘಟನೆಯ ನಾಯಕ. ಪಿಸಿ ಜಾರ್ಜ್ ಬಲೆಗೆ ಯಾರೂ ಬೀಳಬಾರದು ಎಂದು ಶೋಭಾ ಸುರೇಂದ್ರನ್ ಹೇಳಿದ್ದರು.
ದ್ವೇಷಪೂರಿತ ಭಾಷಣಕ್ಕಾಗಿ ಬಂಧನಕ್ಕೊಳಗಾಗಿರುವ ಪಿಸಿ ಜಾರ್ಜ್ ಅವರಿಗೆ ಶೋಭಾ ಸುರೇಂದ್ರನ್ ಮತ್ತು ಇತರರು ಪ್ರಸ್ತುತ ಭಾರೀ ಬೆಂಬಲ ಸೂಚಿಸಿದ್ದಾರೆ. ಪಾಲಾರಿವಟ್ಟಂನಲ್ಲಿ ನಿನ್ನೆ ಜೋರ್ಜ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೋಭಾ ಅವರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಪಿಕೆ ಕೃಷ್ಣದಾಸ್ ಮತ್ತು ಎಎನ್ ರಾಧಾಕೃಷ್ಣನ್ ಜೊತೆಗಿದ್ದರು. ಪಿಸಿ ಜಾರ್ಜ್ ಬೆನ್ನೆಲುಬಾಗಿ ನಿಂತವರು ಎಂಬ ಕಾರಣಕ್ಕೆ ತನ್ನ ಬೆಂಬಲವಿದೆ ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.
"ಪಿಸಿ ಜಾರ್ಜ್ ಬೆನ್ನೆಲುಬು ಎಂಬ ಕಾರಣಕ್ಕೆ ಬೆಂಬಲ ನೀಡಲಾಗಿದೆ. ಇಲ್ಲದಿದ್ದರೆ ತಾನು ಸಹಿತ ಎಲ್ಲಾ ಬಿಜೆಪಿಗರು ವ್ಯರ್ಥವಾಗಿ ಹಿಂದೆ ಸರಿಯಬೇಕಾದ ಸ್ಥಿತಿ ಇದೆ. ಜಾಜ್ ಇದ್ದರೆ ಎಡರಂಗಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ. ಇದರಿಂದ ವಿಷಯವೊಂದನ್ನು ಹಿಡಿದು ನಿಶಕ್ತರಾಗಿಸಲು ಪಿಣರಾಯಿ ಹವಣಿಸಿದ್ದಾರೆ. ಪಿಸಿ ಜಾರ್ಜ್ ಗೆ ಒಂದು ಕಾನೂನಾದರೆ ಇತರರಿಗೆ ಇನ್ನೊಂದು ಕಾನೂನು ವ್ಯವಸ್ಥೆ ಪಾಲಿಸಲಾಗುತ್ತಿದೆ. ಇದರ ಭಾಗವಾಗಿ ಜಾರ್ಜ್ ಅವರನ್ನು ಬೇಟೆಯಾಡಲಾಗುತ್ತಿದೆ " ಎಂದು ಶೋಭಾ ಸುರೇಂದ್ರನ್ ಹೇಳಿದರು.




.webp)
