HEALTH TIPS

ರೈಲು ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಬಿದ್ದ ಯುವತಿ: ಬಾಯ್​ಫ್ರೆಂಡ್​ ಜತೆಗಿನ ವೀಕೆಂಡ್​ ಮೋಜು ದುರಂತ ಅಂತ್ಯ

               ಕೊಯಿಕ್ಕೋಡ್​: ರೈಲು ಡಿಕ್ಕಿ ಹೊಡೆದ ಬೆನ್ನಲ್ಲೇ ನದಿಗೆ ಬಿದ್ದು ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.

            ಮೃತ ಯುವತಿಯನ್ನು ನಫಾತ್​ ಫತಾಹ್​ ಎಂದು ಗುರುತಿಸಲಾಗಿದೆ. ಈಕೆ ಕರುವಂತುರುತಿ ನಿವಾಸಿ.

ಹಳಿಯ ಮೇಲೆ ನಡೆದು ಹೋಗುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು, ನಂತರ ನದಿಗೆ ಬಿದ್ದು        ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.

                  ಈ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್​ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ನದಿಗೆ ಬಿದ್ದ ಆಕೆ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹವನ್ನು ಬೇಪೋರ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಬಾಯ್​ಫ್ರೆಂಡ್​ ಜತೆ ವೀಕೆಂಡ್​ ಮೋಜಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

               ಯುವತಿಯ ಜೊತೆಯಲ್ಲಿದ್ದ ಬಾಯ್​ಫ್ರೆಂಡ್​​ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಆತನನ್ನು ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries