HEALTH TIPS

ಭಾರತದ ಹಡಗು ನಿಗ್ರಹ ಕ್ಷಿಪಣಿ ಪರೀಕ್ಷೆ ಯಶಸ್ವಿ

               ಬಾಲಸೋರ್ಪಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಡಗು ನಿಗ್ರಹ ಕ್ಷಿಪಣಿಯನ್ನು ಬುಧವಾರ ಒಡಿಶಾದ ಚಾಂಡಿಪುರದಲ್ಲಿ ನೌಕಾ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿವೆ.

              ಈ ಯೋಜನೆಯು ತನ್ನೆಲ್ಲಾ ಗುರಿಗಳನ್ನು ಪೂರ್ಣಗೊಳಿಸಿದೆ. ತನ್ನ ಪಥದಲ್ಲಿ ಚಲಿಸುವ ಮೂಲಕ ನಿಖರತೆ ಮತ್ತು ನಿಯಂತ್ರಿತವಾಗಿ ತನ್ನ ನಿರ್ದಿಷ್ಟ ಗುರಿಯನ್ನು ತಲುಪಿದೆ ಎಂದು ಬುಧವಾರ ಡಿಆರ್‌ಡಿಒ ತಿಳಿಸಿದೆ.

               ಈ ಕ್ಷಿಪಣಿ ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಹೆಲಿಕಾಪ್ಟರ್‌ಗಳಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಾಂಚರ್‌ ಕೂಡ ಒಂದಾಗಿದೆ. ಅಲ್ಲದೆ ಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಅನ್ನೂ ಇದು ಒಳಗೊಂಡಿದೆ. ಕ್ಷಿಪಣಿ ಉಡಾವಣೆ ವೇಳೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

              ಈ ಯಶಸ್ವಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ತಂಡವನ್ನು ಅಭಿನಂದಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries