ಕೊಚ್ಚಿ: ಆಲುವಾ ಡಿಪೆÇೀದಿಂದ ಕಳವಾದ ಕೆ ಎಸ್ ಆರ್ ಟಿ ಸಿ ಬಸ್ ಕಾಲೂರ್ ಎಂಬಲ್ಲಿ ಪತ್ತೆಯಾಗಿದೆ. ಕೊಚ್ಚಿ ಉತ್ತರ ಪೋಲೀಸರು ಕಳ್ಳ ಮತ್ತು ಬಸ್ ಪತ್ತೆ ಮಾಡಿದರು. ಆರೋಪಿ ಮಾನಸಿಕ ಅಸ್ವಸ್ಥ ಎಂದು ಪೋಲೀಸರು ಶಂಕಿಸಿದ್ದಾರೆ.
ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೆಕ್ಯಾನಿಕ್ ವೇಷದಲ್ಲಿ ಬಂದ ಶಂಕಿತ ಆರೋಪಿ ಬಸ್ ಕಳವುಗೈದಿದ್ದ. ವೇಗವಾಗಿ ತೆರಳಿದ ಬಸ್ ನ ಬಗ್ಗೆ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಕೂಡಲೇ ಡಿಪೆÇೀಗೆ ಮಾಹಿತಿ ನೀಡಿದ್ದಾರೆ. ಬಸ್ ಸಾಗುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನೂ ಪೋಲೀಸರು ಪಡೆದುಕೊಂಡಿದ್ದರು.
ಬಳಿಕ ಕಾಲೂರು ಪ್ರದೇಶದಲ್ಲಿ ಬಸ್ ಪತ್ತೆಯಾಗಿದೆ. ಆಲುವಾದಿಂದ ಕದ್ದ ಬಸ್ ತೆರಳುವಾಗ ಹಲವೆಡೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಬಸ್ ನ್ನು ಕಾಲೂರು ಪ್ರದೇಶದಲ್ಲಿ ಬಿಟ್ಟು ಹೋಗಿರುವುದನ್ನು ಪೋಲೀಸರು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.




.jpg)
