HEALTH TIPS

ಎರಡೂವರೆ ಲಕ್ಷ ಭಾರತೀಯರ ಉದ್ಯೋಗಕ್ಕೆ ಕುತ್ತು ತಂದ ರಷ್ಯಾ- ಯೂಕ್ರೇನ್​ ಯುದ್ಧ!

              ಯೂಕ್ರೇನ್​: ಯೂಕ್ರೇನ್​ ಮೇಲೆ ರಷ್ಯಾ ದಾಳಿ ನಡೆಸಿ ಮೂರು ತಿಂಗಳು ಗತಿಸಿದೆ. ಇನ್ನೂ ಸಮರ ಮುಗಿದಿಲ್ಲ. ರಷ್ಯಾ ಪಡೆ ದಾಳಿಯನ್ನು ಮುಂದುವರೆಸುತ್ತಿದ್ದು, ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

              ಈ ನಡುವೆಯೇ, ಸುಮಾರು ಎರಡೂವರೆ ಲಕ್ಷ ಭಾರತೀಯರು ಈ ಯುದ್ಧದಿಂದ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ!

                ಇದಕ್ಕೆ ಕಾರಣ, ರಷ್ಯಾದ ವಜ್ರ ಗಣಿಗಾರರಿಂದ ಸರಬರಾಜುಗಳಾದ ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಉದ್ಯಮಕ್ಕೆ ಈ ಯುದ್ಧದಿಂದ ಭಾರೀ ಹೊಡೆತ ಬಿದ್ದಿದೆ. ರಷ್ಯಾ ಸರ್ಕಾರದ ಭಾಗಶಃ ಒಡೆತನದಲ್ಲಿರುವ ಅತಿದೊಡ್ಡ ವಜ್ರದ ಗಣಿ ಅಲ್ರೋಸಾದಿಂದ ಕಚ್ಚಾ ವಜ್ರಗಳ ಸರಬರಾಜು ಸ್ಥಗಿತಗೊಂಡಿದೆ. ಹೀಗಾಗಿ ಸೂರತ್‌ನ ವಜ್ರ ಪಾಲಿಶ್‌ ಮತ್ತು ಕತ್ತರಿಸುವ ಘಟಕಗಳಲ್ಲಿ ಕೆಲಸ ಇಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ಲಕ್ಷ ಕಾರ್ಮಿಕರಿಗೆ ಮೇ 16 ರಿಂದ 15 ದಿನಗಳವರೆಗೆ ರಜೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಭವಿಷ್ಯ ಅತಂತ್ರವಾಗಿದ್ದು, ಈ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

            ಸೂರತ್‌ನಲ್ಲಿರುವ ವಜ್ರದ ಘಟಕಗಳಲ್ಲಿ ಸುಮಾರು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧದಿಂದಾಗಿ ಇದೀಗ ಇವರಿಗೆ ದುಡಿಮೆಯೇ ಇಲ್ಲದಂತಾಗಿದೆ. ಅಮೆರಿಕ ಮತ್ತು ಯುರೋಪ್​ಗಳಲ್ಲಿ ಭಾರತದಲ್ಲಿ ಪಾಲಿಶ್ ಮಾಡಿದ ರಷ್ಯಾದ ವಜ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ಕಂಪನಿಗಳು ನಗದು ಹರಿವು ಮತ್ತು ಪೂರೈಕೆಯಲ್ಲಿ ಕಡಿತ ಉಂಟಾಗಿದೆ ಎಂದು ಗುಜರಾತ್ ಡೈಮಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಜಿಲೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

              ಈ ನಡುವೆ, 'ಡೈಮಂಡ್ ವರ್ಕರ್ಸ್ ಯೂನಿಯನ್ ಗುಜರಾತ್‌'ನ ಸೂರತ್ ಘಟಕವು ಮೇ 4 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ವಜ್ರ ಕಾರ್ಮಿಕರಿಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries