HEALTH TIPS

ಉತ್ತರಪ್ರದೇಶ: ಹೆಚ್ಚುತ್ತಿರುವ ದ್ವೇಷ, ʼಇಸ್ಲಾಮೋಫೋಬಿಯಾʼ ಕುರಿತು ಉಲಮಾಗಳ ಕಳವಳ

             ಲಖ್ನೋ: ಹೆಚ್ಚುತ್ತಿರುವ ʼಇಸ್ಲಾಮೋಫೋಬಿಯಾʼ ಮತ್ತು ಮುಸ್ಲಿಮರ ಇತ್ತೀಚಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಜಮಿಯತ್ ಉಲಮಾ-ಎ-ಹಿಂದ್‌ನ ಸಮಾವೇಶವು ಉತ್ತರ ಪ್ರದೇಶದ ದೇವಬಂದ್‌ನಲ್ಲಿ ಪ್ರಾರಂಭವಾಗಿದೆ.

              ಉತ್ತರ ಪ್ರದೇಶದ ಸಹರಾನ್‌ಪುರದ ದೇವಬಂದ್ ಪಟ್ಟಣದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಮೌಲಾನಾ ಮಹಮೂದ್ ಮದನಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ.

              ದಿಯೋಬಂದ್‌ನಲ್ಲಿ ನಡೆಯುತ್ತಿರುವ ಜಮಿಯತ್ ಉಲಮಾ-ಎ-ಹಿಂದ್‌ನ ಎರಡು ದಿನಗಳ ಸಮ್ಮೇಳನದ ಮೊದಲ ಅಧಿವೇಶನವು ಸಂಘಟನೆಯ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿಯವರ ಭಾಷಣದೊಂದಿಗೆ ಕೊನೆಗೊಂಡಿತು.

            ತಮ್ಮ ಅಧ್ಯಕ್ಷೀಯ ಭಾಷಣ ಮಾಡುವಾಗ ಮೌಲಾನಾ ಮದನಿ ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದ್ವೇಷದ ವಾತಾವರಣ ಹೋಗಲಾಡಿಸಲು ಒಗ್ಗೂಡುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

             'ನಾವು ತಾಳ್ಮೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ. ಆದರೆ ನಾವು ತಲೆಬಾಗಿ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ ಎಂದು ಅರ್ಥವಲ್ಲ. ನಾವು ಎಲ್ಲದರಲ್ಲೂ ರಾಜಿ ಮಾಡಿಕೊಳ್ಳಬಹುದು, ಆದರೆ ನಮ್ಮ ನಂಬಿಕೆಯೊಂದಿಗೆ ಅಲ್ಲ, 'ಎಂದು ಮದನಿ ಹೇಳಿದ್ದಾರೆ. ನಂಬಿಕೆಯು ನಮಗೆ ಯಾವುದೇ ಸಂದರ್ಭದಲ್ಲೂ ಎದೆಗುಂದದಿರಲು ಕಲಿಸಿದೆ ಎಂದು ಅವರು ಹೇಳಿದರು.

            ಮುಸ್ಲಿಮರು ತಮ್ಮ ದೇಶದಲ್ಲಿಯೇ ಒಂಟಿತನ ಅನುಭವಿಸುತ್ತಿದ್ದಾರೆ . ಅವರು ಏಕತೆ ಮತ್ತು ಅಖಂಡ ಭಾರತದ ಬಗ್ಗೆ ಮಾತನಾಡುತ್ತಾರೆ, ಆದರೆ ಮುಸ್ಲಿಮರು ತಮ್ಮ ದೇಶದಲ್ಲಿ ಸ್ವತಂತ್ರವಾಗಿ ನಡೆಯಲು ಕಷ್ಟಪಡುತ್ತಾರೆ. ನಾವು ಇಂದು ತಾಳ್ಮೆಯನ್ನು ಕಾಯ್ದುಕೊಳ್ಳುತ್ತೇವೆ, ಅಗತ್ಯವಿದ್ದರೆ, ನಾವು ಜೈಲು ಮತ್ತು ಗಲ್ಲು ಶಿಕ್ಷೆಯನ್ನು ಸಹ ಒಪ್ಪಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

              ದೇಶದ ಏಕತೆಯನ್ನು ಪ್ರತಿನಿಧಿಸುವುದು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿರುವುದಲ್ಲ ಎಂದು ಪ್ರತಿಪಾದಿಸಿದ ಮದನಿ, ಮತೀಯ ದ್ವೇಷವನ್ನು ಹೋಗಲಾಡಿಸುವ ಜವಾಬ್ದಾರಿ ಸರಕಾರ ಮತ್ತು ಮಾಧ್ಯಮದ ಮೇಲಿದೆ ಎಂದು ಹೇಳಿದ್ದಾರೆ.

             ಜಮಿಯತ್ ಉಲಮಾ-ಎ-ಹಿಂದ್‌ನ ರಾಜ್ಯ ಉಪಾಧ್ಯಕ್ಷ ಮೌಲಾನಾ ಫುರ್ಖಾನ್ ಅಸಾದಿ ಮಾತನಾಡಿ, ಈ ಸಮಯದಲ್ಲಿ ಮುಸ್ಲಿಮರು ಎದುರಿಸುತ್ತಿರುವ ದೇಶದ ಎಲ್ಲಾ ಧಾರ್ಮಿಕ ಮತ್ತು ರಾಜಕೀಯ ಬಿಕ್ಕಟ್ಟುಗಳು, ದೇಶದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯದ ಘಟನೆಗಳು ಮತ್ತು ಸಮಾನ ನಾಗರಿಕ ಸಂಹಿತೆಯ ಸಮಸ್ಯೆಯನ್ನು ಈ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ದೇವಬಂದ್‌ನಲ್ಲಿ ಸಭೆ ಕರೆದಿದ್ದೇವೆ. ಕಾಶಿ-ಮಥುರಾ ವಿಚಾರದಲ್ಲಿ ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ, ಮುಸ್ಲಿಂ ಧಾರ್ಮಿಕ ಸ್ಥಳಗಳನ್ನು ಒಂದರ ನಂತರ ಒಂದರಂತೆ ಟಾರ್ಗೆಟ್ ಮಾಡಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಜಮಿಯತ್ ಈ ವಿಷಯದ ಬಗ್ಗೆಯೂ ಪ್ರಸ್ತಾಪವನ್ನು ಮುಂದಿಡುತ್ತದೆ ಎಂದು ಹೇಳಿದ್ದಾರೆ.

              ಸಮ್ಮೇಳನದಲ್ಲಿ, 11 ಸದಸ್ಯರ 'ಜಮೀಯತ್ ಸದ್ಭಾವನಾ ಮಂಚ್' ಅನ್ನು ರಚಿಸಲು ಸಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ಅದರ ಅರ್ಧದಷ್ಟು ಸದಸ್ಯರು ಮುಸ್ಲಿಮೇತರರು ಆಗಿರುತ್ತಾರೆ. ಮುಸ್ಲಿಮೇತರ ಸಹೋದರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಂಘಟನೆಯು ಪ್ರತಿ ತಿಂಗಳು ಸಭೆಯನ್ನು ಕರೆಯುತ್ತದೆ ಎಂದು thenewindianexpress ವರದಿ ಮಾಡಿದೆ.

              ಈ ಸಮಾವೇಶದಲ್ಲಿ ಭಾರತದ ವಿವಿಧ ಭಾಗಗಳ ಸುಮಾರು 5000 ಉಲಮಾ ಮತ್ತು ಮುಸ್ಲಿಂ ವಿಧ್ವಾಂಸರು ಭಾಗವಹಿಸುತ್ತಿದ್ದಾರೆ. ಮೊದಲ ದಿನದಲ್ಲಿ ಸುಮಾರು 2000 ಉಲಮಾಗಳು ಸಮ್ಮೇಳನದಲ್ಲಿ ಸೇರಿದ್ದಾರೆ. ಪ್ರಸ್ತುತ ಕಾಲದಲ್ಲಿ ದೇಶದ ಮುಸ್ಲಿಮರ ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತಿಗತಿಗಳ ಕುರಿತು ಕಾರ್ಯತಂತ್ರ ರೂಪಿಸುವುದು ಈ ಎರಡು ದಿನಗಳ ಸಮ್ಮೇಳನದ ಉದ್ದೇಶವಾಗಿದ್ದು, ಮಥುರಾದ ಜ್ಞಾನವಾಪಿ ಮಸೀದಿ ಮತ್ತು ಶಾಹಿ ಈದ್ಗಾ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆಯೂ ಚರ್ಚೆಯನ್ನು ಮಾಡಲಾಗುವು. ಸಮಾವೇಶದ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries