ಕುಂಬಳೆ: ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶುಕ್ರವಾರ(ನಿನ್ನೆ) ಆರಂಭಗೊಂಡಿದ್ದು ಊರ ಪರವೂರ ಆಸ್ತಿಕ ಜನಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹರಿದು ಬಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಭಕ್ತಿ ಸಾಂಧ್ರತೆಗೆ ಸಾಕ್ಷಿಯಾಯಿತು.
ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರ ಸಮಿತಿ ಪದಾಧಿಕಾರಿಗಳು ನೇತೃತ್ವ ನೀಡಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ , ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು,ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ,ವಿವಿಧ ಸಮಿತಿ ,ಉಪ ಸಮಿತಿ ಪದಾಧಿಕಾರಿ,ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಯಿಪ್ಪಾಡಿ ಶ್ರೀರಾಜರಾಜೇಶ್ವರಿ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಅರಮನೆ ದಾರಿಯಾಗಿ ಮಾಯಿಪ್ಪಾಡಿ ರಾಜ ರಸ್ತೆಯಲ್ಲಿ ಸಾಗಿ ಕಿನ್ಪ್ರಾ ಪಾರ್ಕ್ ಮುಂಭಾಗದಲ್ಲಾಗಿ ಕ್ಷೇತ್ರಕ್ಕೆ ತಲುಪಿತು. ಹಲವಾರು ಮಕ್ಜಳು ಮಹಿಳೆಯರು, ಯುವಕರು, ವಿವಿಧ ಪದಾಧಿಕಾರಿಗಳು ಮೆರವಣಿಗೆಯ ಯಶಸ್ವಿಗೆ ಸಹಕರಿಸಿದರು.
ಚೆಂಡೆ ಮೇಳ, ವಾದ್ಯಘೋಷ ಹಾಗೂ ಭಜನೆ ,ಹರಿನಾಮ ಸಂಕೀರ್ತನೆಯ ಮೂಲಕ ಸಾಗಿ ಬಂದ ಮೆರವಣಿಗೆಯು ಭಕ್ತಿ ನಿರ್ಭಯತೆಯನ್ನು ಸೃಷ್ಠಿಸಿತು. ಬಳಿಕ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರನ್ನು ಪೂರ್ಣಕುಂಭ ಸ್ವಾಗತಿಸಲಾಯಿತು.
ಇಂದಿನ ಕಾರ್ಯಕ್ರಮ:
ಇಂದು(ಶನಿವಾರ): ಬೆಳಿಗ್ಗೆ 6 ರಿಂದ ಗÀಣಪತಿ ಹವನ, ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬಶುದ್ದಿ, ಅ|ಂಕುರಪೂಜೆ, 7 ರಿಂದ ಭಜನೆ, 10 ರಿಂದ 11ರ ವರೆಗೆ ಹರಿಕೃಷ್ಣ ಮಣೊಳಿತ್ತಾಯ ಮತ್ತು ಚೈತ್ರ ಮಣೊಳಿತ್ತಾಯರಿಂದ ಸಂಗೀತ ಕಾರ್ಯಕ್ರಮ, 11 ರಿಂದ 12.30 ರ ವರೆಗೆ ದಿವ್ಯಾ ಮಹೇಶ ಮತ್ತು ದಿಶಾ ಮಹೇಶ ಅವರಿಂದ ಸಂಗೀತ ಕಾರ್ಯಕ್ರಮ, 12.30 ಕ್ಕೆ ಮಹಾಪೂಜೆ, ಅನ್ನ ಪ್ರಸಾದ ವಿತರಣೆ, ಸಂಜೆ 5 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಧಾರ್ಮಿಕ ಉಪನ್ಯಾಸ ನೀಡುವರು. ಕಟೀಲು ಶ್ರೀಕ್ಷೇತ್ರದ ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಗೌರವ ಉಪಸ್ಥಿತರಿರುವರು. ಜಯದೇವ ಖಂಡಿಗೆ, ವೇದಮೂರ್ತಿ ನಾರಾಯಣ ರಂಗಾ ಭಟ್ ಮಧೂರು, ಪುರೋಹಿತ ರತ್ನ ಕೇಶ ಆಚಾರ್ಯ ಉಳಿಯತ್ತಡ್ಕ, ಡಿ.ದಾಮೋದರ ಅತಿಥಿಗಳಾಗಿರುವರು. ಗಣ್ಯರು ಉಪಸ್ಥಿತರಿರುವರು. ಸಂಜೆ 7 ರಿಂದ ಹೋಮ, ಕಲಶಾಭಿಷೇಕ ಮೊದಲಾದ ವಿಧಿವಿಧಾನಗಳು ನಡೆಯಲಿವೆ. 7.30 ರಿಂದ 9.30ರ ವರೆಗೆ ನಾಟ್ಯ ವಿದ್ಯಾ ನಿಲಯ ಕುಂಬಳೆಯ ವಿದುಷಿಃ ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ, ರಾತ್ರಿ 9.30 ರಿಂದ ಸೂರಂಬೈಲು ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದವರಿಂದ ಸೌದಾಸ ಚರಿತ್ರೆ ಯಕ್ಷಗಾನ ಬಯಲಾಟ ನಡೆಯಲಿದೆ.







