ಮುಂಬೈ: ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಅಧ್ಯಕ್ಷ ಸ್ಥಾನಕ್ಕೆ ನರೀಂದರ್ ಬಾತ್ರಾ ಅವರು ಬುಧವಾರ ರಾಜೀನಾಮೆ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಹೆಚ್) ಅಧ್ಯಕ್ಷರೂ ಆಗಿರುವ ಬಾತ್ರಾ ಅವರು 2017ರಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಮುಂದಿನ ಅವಧಿಗೆ ಐಒಎ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ ಬಾತ್ರಾ, ವಿಶ್ವ ಹಾಕಿಯು ಅಭಿವೃದ್ಧಿಯ ಹಂತದಲ್ಲಿ ಸಾಗುತ್ತಿರುವ ಸಮಯದಲ್ಲಿ, Hockey5s ನ ಪ್ರಚಾರದೊಂದಿಗೆ, ಈ ವರ್ಷ ಹೊಸ ಸ್ಪರ್ಧೆಯ ಸೃಷ್ಟಿ, ಅಂತರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ ಐಎಚ್) ಹಾಕಿ ನೇಷನ್ಸ್ ಕಪ್ ಮತ್ತು ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ವೇದಿಕೆಗಳು ಮತ್ತು ಚಟುವಟಿಕೆಗಳನ್ನು ಪ್ರಾರಂಭಿಸಲು ಅಧ್ಯಕ್ಷರಾಗಿ ಈ ಎಲ್ಲಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಬಾತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ, ನಾನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್(IOA)ನ ಅಧ್ಯಕ್ಷರಾಗಿ ಮುಂದಿನ ಅವಧಿಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ”ಎಂದು ಅವರು ಹೇಳಿದ್ದಾರೆ.
ಬಾತ್ರಾ ಅವರು 2017 ರಿಂದ ಐಒಎ ಮುಖ್ಯಸ್ಥರಾಗಿದ್ದಾರೆ ಮತ್ತು 2016 ರಿಂದ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಮುಖ್ಯಸ್ಥರಾಗಿದ್ದಾರೆ.





