HEALTH TIPS

ಎಲ್ಲರೂ ಮರ್ಯಾದೆಯಿಂದ ಬದುಕಬೇಕು: ಇಲ್ಲದಿದ್ದರೆ ಸಿರಿಯಾಕ್ಕೆ ಹೋಗಿ ಸಿಡಿದೇಳಿ: ರಾಜಕೀಯ ವೀಕ್ಷಕ ಎ.ಜಯಶಂಕರ್

                   ಕೊಚ್ಚಿ: ಅಲಪ್ಪುಳದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ರ್ಯಾಲಿಯ ಘಟನೆ ಬಗ್ಗೆ ರಾಜಕೀಯ ವೀಕ್ಷಕ ಅಡ್ವ. ಎ.ಜಯಶಂಕರ್ ಅ|ಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಬಿಸಿ ಮಲಯಾಳಂ ನ್ಯೂಸ್ ಎಂಬ ವೆಬ್ ಚಾನೆಲ್ ನಲ್ಲಿ ಜಯಶಂಕರ್ ವ್ಯೂಸ್ ಎಂಬ ವಿಡಿಯೋ ಕಾರ್ಯಕ್ರಮದ ಮೂಲಕ ಪಾಪ್ಯುಲರ್ ಫ್ರಂಟ್ ನ ಸವಾಲನ್ನು ಜಯಶಂಕರ್ ಟೀಕಿಸಿದ್ದಾರೆ.

                ಮರ್ಯಾದೆಯಿಂದ ಬಾಳದಿದ್ದರೆ ಸಿರಿಯಾಕ್ಕೆ ಹೋಗಿ ಸಿಡಿದೇಳಬಹುದು ಎಂದು ಪಿಎಫ್ ಐ ಗೆÉ ಹಾಗೂ ಹುಡುಗನ ಪೋಷಕರಿಗೆ ಹೇಳುವುದೊಂದೇ ಮಾತು ಎಂದು ಜಯಶಂಕರ್ ಹೇಳಿದ್ದಾರೆ. ಇದನ್ನು ಕೇಳಿದರೆ ನಮ್ಮಲ್ಲಿ ಯಾರೂ ಹೆದರುವುದಿಲ್ಲ. ನಿಮ್ಮ ಕೆಲವು ಅಭಿಮಾನಿಗಳು ಥ್ರಿಲ್ ಆಗುತ್ತಾರೆ. ಮರ್ಯಾದೆಯಿಂದ ಬದುಕಿದರೆ ಎಲ್ಲರೂ ಒಳ್ಳೆಯವರಾಗಬಹುದು. ಇಲ್ಲವಾದಲ್ಲಿ ತಡಿಯಂಡವಿಡ ನಜೀರ್, ಗಲ್ಲಿಗೇರಿದ ಯಾಕೂಬ್ ಮೆಮನ್, ಅಫ್ಜಲ್ ಗುರು, ಅಜ್ಮಲ್ ಕಸಬ್ ಅವರ ಸ್ಥಿತಿಯೂ ಇದೇ ಆಗಲಿದೆ ಎಂದು ಜಯಶಂಕರ್ ಹೇಳಿದರು.

                 ಉದ್ರೇಕಕಾರಿ ಘೋಷಣೆ ಕೂಗಲು ಹಲವರು ಇರುತ್ತಾರೆ. ಹುಲಿಯ ಬಾಲ ಹಿಡಿದವರು ಸಿಕ್ಕಿಬೀಳುತ್ತಾರೆ ಎಂದು ಜಯಶಂಕರ್ ಅವರು ಸ್ನೇಹಬುದ್ಧಿಯಿಂದ ವಿನಮ್ರವಾಗಿ ಸಲಹೆ ನೀಡಿದರು. ಮೇ 21 ಭಯೋತ್ಪಾದನಾ ವಿರೋಧಿ ದಿನವಾಗಿತ್ತು. ಅದು ನಮ್ಮ ಪ್ರಧಾನಿ ರಾಜೀವ್ ಗಾಂಧಿಯವರನ್ನು ತಮಿಳು ಭಯೋತ್ಪಾದಕರು ಹತ್ಯೆಗೈದ ದಿನಾಚರಣೆ. ಅದೇ ದಿನ, ಪೆರಾರಿವಾಲನ್ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಮತ್ತು ಅವರ ಆಶೀರ್ವಾದ ಪಡೆಯಲು ಚೆನ್ನೈಗೆ ತೆರಳಿದರು. ಅಂದು ಪಾಪ್ಯುಲರ್ ಫ್ರಂಟ್ ಕೂಡ ಕಾರ್ಯಕ್ರಮ ಆಯೋಜಿಸಿತ್ತು. ಇದು ಆ ದಿನದ  ಘೋಷವಾಕ್ಯವಾದುದು ದುರ್ದೈವ ಎಂದು ಜಯಶಂಕರ್ ತಿಳಿಸಿದರು.

                   ಭಾರತದ ಸಂಪೂರ್ಣ ವಿನಾಶಕ್ಕೆ ಆಜಾದಿ ಮತ್ತು ಫ್ಯಾಸಿಸಂ ವಿರುದ್ಧ ಆಜಾದಿ ಎಂದು ಕರೆಯುವವರೂ ಇದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಎಲ್ಲದಕ್ಕೂ ಹಕ್ಕಿದೆ. ಮಕ್ಕಳ ಬಳಸಿ ಹಿರಿಯರೇ ಉದ್ರಿಕ್ತತೆಗೆ ಕಾರಣರಾಗುತ್ತಿದ್ದಾರೆ. 

                  1992 ರಲ್ಲಿ ಮದನಿ ಎರ್ನಾಕುಳಂ ಮರೈನ್ ಡ್ರೈವ್‍ನಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಇಸ್ಲಾಮಿಕ್ ಸೇವಕ ಸಂಘದ ಹೆಸರನ್ನು ಇಡಲಾಗಿತ್ತು. ಆರು ತಿಂಗಳ ನಂತರ, ಅವನಿಗೆ ಏನಾಯಿತು ಮತ್ತು ಅವನೀಗ ಎಲ್ಲಿದ್ದಾನೆ ಎಂದು ಜನರಿಗೆ ತಿಳಿದಿದೆ. ಮದನಿಯ ಇಂದಿನ ಸ್ಥಿತಿಯನ್ನು ನೆನೆಯುವುದು ಒಳ್ಳೆಯದು ಎಂದು ಜಯಶಂಕರ್ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries