ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್‌ಗೆ, ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ನ್ಯಾಯಾಲಯ ಸಮನ್ಸ್ ನೀಡಿದೆ.
0
samarasasudhi
ಮೇ 28, 2022
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್‌ಗೆ, ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 15ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ನ್ಯಾಯಾಲಯ ಸಮನ್ಸ್ ನೀಡಿದೆ.
1989ರಲ್ಲಿ ನಿಷೇಧಿತ ಜೆಕೆಎಲ್‌ಎಫ್‌ನ (ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್) ನಾಯಕ ಯಾಸಿನ್ ಮಲ್ಲಿಕ್, ಐವರು ಭಯೋತ್ಪಾದಕರ ಬಿಡುಗಡೆಗಾಗಿ ರುಬಿಯಾ ಅವರನ್ನು ಅಪಹರಿಸಿದ್ದ.
1990ರ ಆರಂಭದಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆ ಆರಂಭವಾದಾಗಿನಿಂದ ವಿಚಾರಣೆಗೆ ಹಾಜರಾಗಲು ರುಬಿಯಾ ಅವರಿಗೆ ಸೂಚಿಸಿರುವುದು ಇದೇ ಮೊದಲು. ಸದ್ಯ ರುಬಿಯಾ ತಮಿಳುನಾಡಿನಲ್ಲಿ ವಾಸವಾಗಿದ್ದಾರೆ.