ಮಂಜೇಶ್ವರ: ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ವಿದ್ಯಾಭ್ಯಾಸ, ಆಸ್ಪತ್ರೆ ಹಾಗೂ ಹೆಣ್ಣು ಮಕ್ಕಳ ವಿವಾಹ ಮೊದಲಾದ ಕ್ಷೇತ್ರಗಳಲ್ಲಿ ಅವರಿಗೆ ಬೇಕಾದ ಸಹಾಯ ಸಹಕಾರವನ್ನು ನೀಡುವ ಉದ್ದೇಶದಿಂದ 2020 ರಲ್ಲಿ ವಾಟ್ಸಪ್ ಮೂಲಕ ರೂಪೀಕೃತಗೊಂಡ ಮಂಜೇಶ್ವರ ಲೈಫ್ ಲಾಂಗ್ ಚಾರಿಟಿಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ಮಂಜೇಶ್ವರದ ಹೃದಯ ಭಾಗದಲ್ಲಿರುವ ಹೊಸಂಗಡಿ ಗ್ರ್ಯಾಂಡ್ ಅಡಿಟೋರಿಯಂನಲ್ಲಿ ನಡೆಯಿತು.
ವಧುವಿಗೆ 5 ಪವನ್ ಆಭರಣ ಹಾಗೂ ವಧು ವರನಿಗೆ ಉಡುಗೆ ಹಾಗೂ ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿ ಆಯೋಜಿಸಿದ 3 ಜೋಡಿಗಳ ಸಾಮೂಹಿಕ ವಿವಾಹದ ಚಾರಿಟಿಯ ಕಾರ್ಯಕ್ರಮ ಜನಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ಭಾರೀ ಪ್ರಶಂಶೆಗೂ ಪಾತ್ರವಾಯಿತು.
ಮುಂಬೈಯಲ್ಲಿ ಉದ್ಯಮಿಯಾಗಿರುವ ಅಶ್ಪಾಕ್ ಎಂಬವರ ಮುತುವರ್ಜಿಜಿಯಿಂದ ಹುಟ್ಟಿಕೊಂಡ ಈ ಚಾರಿಟಿಯು ಬಳಿಕ ಮಂಜೇಶ್ವರದ ಹಲವು ಸಮಾಜ ಸೇವಾ ಮನೋಭಾವವುಳ್ಳ ಉದ್ಯಮಿಗಳ ಹಾಗೂ ಸಮಾಜ ಸೇವಕರ ಬೆಂಬಲದೊಂದಿಗೆ ಇದೀಗ ಈ ಲೈಫ್ ಲಾಂಗ್ ಚಾರಿಟಿ ಹೆಮ್ಮರವಾಗಿ ಬೆಳೆದು ಸೇವೆಯನ್ನು ನೀಡುತ್ತಿದೆ. ಚಾರಿಟಿ ರೂಪುಗೊಂಡ ಬಳಿಕ ಕೋವಿಡ್ ಮಹಾಮಾರಿ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಚಾರಿಟಿ ವತಿಯಿಂದ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಆಗಿರಲಿಲ್ಲ. ಇದೀಗ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಚಾರಿಟಿಯ ಮೊದಲ ಹೆಜ್ಜೆಗೆ ಚಾಲನೆ ದೊರತಿದೆ.
ಮುಂದಿನ ದಿನಗಳಲ್ಲಿ ಜಾತಿ ಮತ ಭೇದಗಳಿಲ್ಲದೆ ಮಂಜೇಶ್ವರ ಹಾಗೂ ಮೀಂಜ ಗ್ರಾ.ಪಂಚಾಯತಿ ವ್ಯಾಪ್ತಿಯಲ್ಲಿರುವ ನಿರ್ಗತಿಕ ಕುಟುಂಬಗಳನ್ನು ಪತ್ತೆ ಹಚ್ಚಿ ವಿಧ್ಯಾಭ್ಯಾಸ, ರೋಗಿಗಳಿಗೆ ಆಸ್ಪತ್ರೆ ವೆಚ್ಚ , ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದು ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಬೇಕಾದ ಉಪಕರಣಗಳನ್ನು ವಿತರಿಸುವುದು ಮೊದಲಾದ ರೀತಿಯಲ್ಲಿ ಚಾರಿಟಿಯ ಸೇವೆಯನ್ನು ನೀಡಲು ತೀರ್ಮಾನಿಸಿರು ಬಗ್ಗೆ ಅಧಿಕೃತರು ಮಾಹಿತಿ ನೀಡಿದ್ದಾರೆ.
ಮಂಜೇಶ್ವರದ ಹೆಸರಾಂತ ಉದ್ಯಮಿ ಹಾಗೂ ಲೈಫ್ ಲಾಂಗ್ ಚಾರಿಟಿ ಅಧ್ಯಕ್ಷರೂ ಆಗಿರುವ ಯಾಫೆÇ್ಕೀ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ವಾಟಿಸಿದರು. ಸಯ್ಯದ್ ಅತ್ತಾವುಲ್ಲ ತಂಙಳ್ ಜೋಡಿಗಳಿಗೆ ಸಿಖಾಹ್ ಸೆರವೇರಿಸಿ ಪ್ರಾರ್ಥನೆ ನಡೆಸಿದರು. ಅಶ್ರಫ್ ಪೆರ್ಲ, ಫಾರೂಕ್ ಹಾಜಿ , ಅನ್ಸಾಫ್, ಆರ್.ಕೆ. ಭಾವ ಹಾಜಿ, ಅಬ್ದಲ್ಲ ಕಜೆ, ಅಶ್ಪಾಕ್, ಮಹ್ಮೂದ್ ಹಾಜಿ, ಎಂ.ಕೆ. ಖಲೀಲ್ ಪಾಂಡ್ಯಾಲ್, ಲತೀಫ್ ಬನಾನ, ನಬ್ರಾಸ್ ಮೊದಲಾದವರು ನೇತೃತ್ವ ನೀಡಿದರು. ವೇದಿಕೆಯಲ್ಲಿ ಚಾರಿಟಿ ಸದಸ್ಯರುಗಳಾದ ಹನೀಫ್ ಪೊಸೋಟು, ಇಕ್ಬಾಲ್ ಪೊಸೋಟು, ಸಿದ್ದೀಖ್, ಇಬ್ರಾಹಿಂ ಬುಟೋ, ನಝೀರ್ ಮೊದಲಾದವರು ಉಪಸ್ಥಿತರಿದ್ದರು.




.jpg)
.jpg)
