ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವ ವಿಷಯದ ಕುರಿತಂತೆ ದೆಹಲಿ ಹೈಕೋರ್ಟ್‌ನ ಭಿನ್ನ ಮತದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
0
samarasasudhi
ಮೇ 17, 2022
ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವ ವಿಷಯದ ಕುರಿತಂತೆ ದೆಹಲಿ ಹೈಕೋರ್ಟ್‌ನ ಭಿನ್ನ ಮತದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಹೈಕೋರ್ಟ್‌ನಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ಖುಷ್ಬೂ ಸೈಫಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಹೆಂಡತಿಯ ಒಪ್ಪಿಗೆ ಇಲ್ಲದೆ ಗಂಡನು ಬಲವಂತದಿಂದ ನಡೆಸುವ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸುವ ಕುರಿತಂತೆ ದೆಹಲಿ ಹೈಕೋರ್ಟ್‌ನ ಪೀಠವು ಮೇ 11ರಂದು ಭಿನ್ನಮತದ ತೀರ್ಪು ನೀಡಿತ್ತು. ಈ ಸಂಬಂಧ ವಾದಿ-ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವನ್ನೂ ಕಲ್ಪಿಸಿತ್ತು.
ಐಪಿಸಿ ಸೆಕ್ಷನ್ 375ರ 2ನೇ ವಿನಾಯಿತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ನ್ಯಾಯಪೀಠದ ನ್ಯಾಯಮೂರ್ತಿಗಳಾದ ರಾಜೀವ್ ಶಖಧರ್ ಮತ್ತು ಸಿ. ಹರಿಶಂಕರ್ ಅವರು ಬೇರೆ ಬೇರೆ ತೀರ್ಪುಗಳನ್ನು ನೀಡಿದ್ದರು.
'ನನ್ನ ಪ್ರಕಾರ, ಆಕ್ಷೇಪಾರ್ಹ ವಿನಾಯಿತಿಗಳು (ಸೆಕ್ಷನ್ 375, ಸೆಕ್ಷನ್ 376 ಇ) ಸಂವಿಧಾನದ 14, 15, 19(1) (ಎ) ಹಾಗೂ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ವಿನಾಯಿತಿಗಳನ್ನು ತೆಗೆದುಹಾಕಬೇಕು' ಎಂದು ನ್ಯಾಯಮೂರ್ತಿ ಶಖಧರ್ ಹೇಳಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹರಿಶಂಕರ್, 'ಶಖಧರ್ ಅವರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಈ ವಿನಾಯಿತಿಗಳು ಸಂವಿಧಾನದ 14, 15, 19(1) (ಎ) ಹಾಗೂ 21ನೇ ವಿಧಿಗಳ ಉಲ್ಲಂಘನೆ ಆಗುವುದಿಲ್ಲ' ಎಂದು ಹೇಳಿದರು.