ನವದೆಹಲಿ: ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಜೂನ್‌ನಿಂದ ಎರಡು ತಿಂಗಳ ಅವಧಿಯ 'ಹರ್ ಘರ್ ದಸ್ತಕ್ (ಪ್ರತಿ ಮನೆಗೂ ಲಸಿಕೆ)' ಅಭಿಯಾನವನ್ನು ನಡಸಲು ನಿರ್ದೇಶಿಸಿದೆ.
0
samarasasudhi
ಮೇ 20, 2022
ನವದೆಹಲಿ: ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಜೂನ್‌ನಿಂದ ಎರಡು ತಿಂಗಳ ಅವಧಿಯ 'ಹರ್ ಘರ್ ದಸ್ತಕ್ (ಪ್ರತಿ ಮನೆಗೂ ಲಸಿಕೆ)' ಅಭಿಯಾನವನ್ನು ನಡಸಲು ನಿರ್ದೇಶಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಎಲ್ಲ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವ ಮೂಲಕ ಪೂರ್ಣ ಲಸಿಕೆ ನೀಡಿದ ಗುರಿ ಸಾಧಿಸಲು ತಿಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆಗೆ ನಡೆದ ಸಭೆಯಲ್ಲಿ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, 'ಅಭಿಯಾನದ ವೇಳೆ ಯಾವುದೇ ಹಂತದಲ್ಲಿ ಲಸಿಕೆ ಪೋಲು ಆಗದಂತೆ ಜಾಗ್ರತೆ ವಹಿಸಬೇಕು' ಎಂದು ಸೂಚಿಸಿದರು.
'ಬಳಕೆ ಅವಧಿ ಮೀರಲಿರುವ ಲಸಿಕೆಗಳನ್ನು ಮೊದಲಿಗೆ ಬಳಸುವ ಮೂಲಕ ಪೋಲು ಆಗದಂತೆ ಎಚ್ಚರಿಕೆ ವಹಿಸಬೇಕು. ಎರಡನೇ ಹಂತದ 'ಹರ್ ಘರ್ ದಸ್ತಕ್' ಅಭಿಯಾನಕ್ಕಾಗಿ ಜಿಲ್ಲೆ, ಗ್ರಾಮ, ಬ್ಲಾಕ್ ಹಂತದಲ್ಲಿ ಯೋಜನೆಗಳನ್ನು ರೂಪಿಸಬೇಕು' ಎಂದೂ ಸಲಹೆ ಮಾಡಿದ್ದಾರೆ.
ಅರ್ಹ ಫಲಾನುಭವಿಗಳ ಗುಂಪುಗಳಿಗೆ ಆದ್ಯತೆಯ ಮೇರೆಗೆ ಮೊದಲ, ಎರಡನೇ ಮತ್ತು ಬೂಸ್ಟರ್ ಡೋಸ್ ನೀಡಬೇಕು ಎಂಬುದೇ ಈ ಅಭಿಯಾನದ ಉದ್ದೇಶ. ಇದಕ್ಕಾಗಿ ಮನೆ, ಮನೆಯ ಅಭಿಯಾನ ನಡೆಸಬೇಕು. ವೃದ್ಧಾಶ್ರಮಗಳು, ಸಣ್ಣ ಕೈಗಾರಿಕೆಗಳು, ಜೈಲು, ಶಾಲೆ-ಕಾಲೇಜುಗಳಂತ ಸ್ಥಳಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದು ಕೇಂದ್ರ ಸರ್ಕಾರ ಸಲಹೆ ಮಾಡಿದೆ.