ಕಾಸರಗೋಡು: ರಾಜ್ಯದಲ್ಲಿ ಸಾಮಾಜಿಕ ಶಾಂತಿ ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮದ ಜತೆಗೆ ಸಾಮಾಜಿಕ ಬದುಕಿಗೆ ಭಂಗ ತರುವ ಘಟನೆಗಳು ನಡೆಯದಂತೆ ಪೊಲೀಸರು ಜಾಗ್ರತೆ ವಹಿಸುವುದು ಅಗತ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅವರು ಬುಧವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆÇಲೀಸ್ ಇಲಾಖೆಯಲ್ಲಿ ಜಾರಿಗೊಳಿಸಲಾದ ಅಭಿವೃದ್ಧಿ ಚಟುವಟಿಕೆಗಳನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನಲ್ಲಿ ನವೀಕರಿಸಲಾದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಧಾನ ಕಚೇರಿಯನ್ನು ಮುಖ್ಯಮಂತ್ರಿಯವರು ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಹೊಸದಾಗಿ ಸುಸಜ್ಜಿತ ವಿಐಪಿ ಕೊಠಡಿ, ಸಂದರ್ಶಕರ ಕೊಠಡಿ ಮತ್ತು ಸ್ವಾಗತ ಕೊಠಡಿಗಳನ್ನು ಹೊಂದಿದೆ. ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್‍ಎ ನೆಲ್ಲಿಕುನ್ನು ನವೀಕೃತ ಕಟ್ಟಡದ ಶಿಲಾಫಲಕವನ್ನು ಅನಾವರಣಗೊಳಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ವಿಶೇಷ ವಿಭಾಗದ ಡಿವೈಎಸ್ಪಿ ಪಿ.ಕೆ.ಸುಧಾಕರನ್, ಅಪರಾಧ ವಿಭಾಗದ ಡಿವೈಎಸ್ಪಿ ಸುನಿಲ್ ಕುಮಾರ್, ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಮ್ಯಾಥ್ಯೂ ಉಪಸ್ಥಿತರಿದ್ದರು. ಜಿಲ್ಲಾ ಹೆಚ್ಚುವರಿ ಎಸ್ಪಿ ಹರೀಶ್ಚಂದ್ರ ನಾಯ್ಕ್ ಸ್ವಾಗತಿಸಿದರು. ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ಸತೀಶ್ ಅಲಕ್ಕಲ್ ವಂದಿಸಿದರು.
ಮಕ್ಕಳ ಸ್ನೇಹಿ ಪೊಲೀಸ್ ಠಾಣೆ:
ವೆಳ್ಳರಿಕುಂಡು ಪೆÇಲೀಸ್ ಠಾಣೆ ಮಲೆನಾಡಿನ ಮೊದಲ ಮಕ್ಕಳ ಸ್ನೇಹಿ ಪೆÇಲೀಸ್ ಠಾಣೆಯಾಗಿ ರೂಪಿಸಲಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‍ಲೈನ್ ಮೂಲಕ ಠಾಣೆಯ ಔಪಚಾರಿಕ ಘೋಷಣೆ ನಡೆಸಿದ್ದಾರೆ. ಠಾಣೆಗೆ ಹೊಂದಿಕೊಂಡಂತೆ ಎರಡು ಕೊಠಡಿಗಳನ್ನು ಹೊಂದಿದ್ದು, ನಿಲ್ದಾಣಕ್ಕೆ ಬರುವ ಮಕ್ಕಳಿಗೆ ಆಟವಾಡಲು ಹಾಗೂ ವಿಶ್ರಾಂತಿ ಪಡೆಯಲು ಸೌಲಭ್ಯ ಕಲ್ಪಿಸಲಾಗಿದೆ. ಟಿವಿ, ಹೊಸ ಆಸನಗಳು ಮತ್ತು ಆಟಿಕೆಗಳ ಜತೆಗೆ ಮಕ್ಕಳನ್ನು ಆಕರ್ಷಿಸಲು ಗೋಡೆಗಳ ಮೇಲೆ ಚಿತ್ರಗಳನ್ನೂ ಬರೆಯಲಾಗಿದೆ. ವೆಳ್ಳರಿಕ್ಕುಂಡು ಪೆÇಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಡಾ. .ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.





