HEALTH TIPS

ಕೋವಿಡ್-19: ದೇಶದಲ್ಲಿ 17 ಸಾವಿರದ 336 ಹೊಸ ಪ್ರಕರಣ, ಸಕ್ರಿಯ ಕೇಸುಗಳು 88 ಸಾವಿರದ 284

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸೋಂಕು ನಿನ್ನೆಗಿಂತ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 17,336 ಸೋಂಕಿತರು ಪತ್ತೆಯಾಗಿದ್ದು, ಕಳೆದ 124 ದಿನಗಳಲ್ಲಿ ಅತ್ಯಧಿಕವಾಗಿದೆ. ಮೊನ್ನೆ 13,313 ಪ್ರಕರಣ ವರದಿಯಾಗಿದ್ದವು.

ಕಳೆದ 24 ಗಂಟೆಗಳಲ್ಲಿ 13,029 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 4,27,49,056ಕ್ಕೆ ಏರಿಕೆಯಾಗಿದೆ. 

ಪ್ರಸ್ತುತ ದೇಶದಲ್ಲಿ 88 ಸಾವಿರದ 284 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದು, ಸಕ್ರಿಯ ಕೇಸುಗಳ ಪ್ರಮಾಣ ಶೇಕಡಾ 0.20ರಷ್ಟಿದೆ.ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.59ರಷ್ಟಿದೆ.ಇದುವರೆಗೆ ಸೋಂಕಿನಿಂದ ದೇಶದಲ್ಲಿ 5 ಲಕ್ಷದ 24 ಸಾವಿರದ 954 ಮಂದಿ ಬಲಿಯಾಗಿದ್ದಾರೆ. 

ದೇಶದಲ್ಲಿ ಒಟ್ಟಾರೆ 196 ಕೋಟಿಯ 77 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ದೇಶದ ನಾಗರಿಕರಿಗೆ ನೀಡಲಾಗಿದೆ. ಕೊರೋನಾ ಸೋಂಕು ಬಂದ ಮೇಲೆ ದೇಶದಲ್ಲಿ 85.98 ಕೋಟಿ ಮಂದಿಗೆ ಕೋವಿಡ್  ಪರೀಕ್ಷೆ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 4,01,649 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries