HEALTH TIPS

ಕುಂಬಳೆಯಲ್ಲಿ ಪಿ. ಮುರಳೀಧರನ್ ಹುತಾತ್ಮ ದಿನಾಚರಣೆ: ಯುವಜನ ರ್ಯಾಲಿ, ಸಾರ್ವಜನಿಕ ಸಭೆ ಆಯೋಜನೆ

ಕುಂಬಳೆ: ರಾಜಕೀಯ ವಿರೋಧಿಗಳಿಂದ ಹತ್ಯೆಗೀಡಾದ ಪಿ. ಮುರಳೀಧರನ್ ಅವರ ಹುತಾತ್ಮ ದಿನಾಚರಣೆಯ ಅಂಗವಾಗಿ ಕುಂಬಳೆಯಲ್ಲಿ ಯುವಜನ ರ್ಯಾಲಿ ಹಾಗೂ ಸಾರ್ವಜನಿಕ ಸಭೆ ಮಂಗಳವಾರ ಸಂಜೆನಡೆಯಿತು.

ಕುಂಬಳೆಯ ಶಾಂತಿಪಳ್ಳ ಪೆಟ್ರೋಲ್ ಬಂಕ್ ಬಳಿಯಿಂದ ಯುವಜನ ರ್ಯಾಲಿ ನಡೆಯಿತು. ಬಳಿಕ ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಯಿತು. ಡಿವೈಎಫ್‍ಐ ರಾಜ್ಯ ಜಂಟಿ ಕಾರ್ಯದರ್ಶಿ ಕೆ. ಅನುಶ್ರೀ ಸಭೆಯನ್ನು ಉದ್ಘಾಟಿಸಿದರು.

ಡಿವೈಎಫ್‍ಐ ಬ್ಲಾಕ್ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ವಿ. ರತೀಶ್, ಜಂಟಿ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಉಪಾಧ್ಯಕ್ಷ ನಿಸಾರುದ್ದೀನ್ ಮಲಂಗರ, ಬ್ಲಾಕ್ ಕೋಶಾಧಿಕಾರಿ ಮನೀಷ ಎಂ. ಹಾಗೂ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಮಾತನಾಡಿದರು. ಬ್ಲೋಕ್ ಕಾರ್ಯದರ್ಶಿ ವಿಶ್ವರಾಜ್ ಪೆರ್ಲ ಸ್ವಾಗತಿಸಿದರು.

ಇದಕ್ಕೂ ಮೊದಲು ಹುತಾತ್ಮ ಮಂಟಪದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿ.ಎಚ್. ಕುಞಂಬು ಅವರು ಪಿ. ಮುರಳೀಧರನ್ ಅವರನ್ನು ಸ್ಮರಿಸಿ ಸಂಸ್ಮರಣಾ ಕಾರ್ಯಕ್ರಮ ನಡೆಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries