ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ 2022ರ ಆ.6ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
0
samarasasudhi
ಜೂನ್ 30, 2022
ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ 2022ರ ಆ.6ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆ. ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಅಗತ್ಯವಿದ್ದಲ್ಲಿ ಆ.6ರಂದು ನಡೆಸಲು ಚುನಾವಣಾ ಆಯೋಗ ನಿಗದಿ ಮಾಡಿದೆ.
ಜುಲೈ 24ಕ್ಕೆ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಕೊನೆಗೊಳ್ಳಲಿದ್ದು, ಜುಲೈ 18ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗಾಗಲೇ ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದಾರೆ. ಆಯ್ಕೆಯಾಗುವ ಹೊಸ ರಾಷ್ಟ್ರಪತಿ ಅವರು ಜುಲೈ 25ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.