HEALTH TIPS

ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ; ಬಾಲ್ಯದ ನನ್ನ ನೋವು '777 ಚಾರ್ಲಿ' ಕಥೆ ಬರೆಯಲು ಸಹಾಯ ಮಾಡಿತು: ಕಿರಣ್ ರಾಜ್

           ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆಗೆ ಒಂದು ವಾರಕ್ಕಿಂತ ಕಡಿಮೆ ಅವಧಿಯಿದ್ದು, ಪ್ರೀಮಿಯರ್ ಶೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದೆ, ಸುಮಾರು 21 ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು, ದೆಹಲಿ ಲಕ್ನೋ, ಮತ್ತು ಅಮೃತಸರದಲ್ಲಿ ಚಾರ್ಲಿಯ ಜೀವನ ತೆರೆಮೇಲೆ ನೋಡಿ ಭಾವುಕರಾಗಿದ್ದಾರೆ. “777 ಚಾರ್ಲಿ ಚಿತ್ರೀಕರಣ ಮಾಡುವಾಗ ನಾನು ಸಾಕಷ್ಟು ಅಡೆತಡೆಗಳನ್ನು ಎದುರಿಸಿದೆ.

ನಾನು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು  ಕಳೆದಿದ್ದೇನೆ, ಪ್ರಯಾಣ ಸುಲಭವಾಗಿರಲಿಲ್ಲ ಆದರೆ ಈಗ  ಪ್ರೇಕ್ಷಕರ ಕಣ್ಣುಗಳಲ್ಲಿ 777 ಚಾರ್ಲಿ ಪ್ರಯಾಣದ ಪ್ರತಿಬಿಂಬ ಕಾಣುತ್ತಿದೆ, ಇದು ಕಿರಣ್ ರಾಜ್ ನಿರ್ದೇಶನ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ, ಕನ್ನ, ತಮಿಳು, ತೆಲುಗು ಮತ್ತು ಮಲಯಾಳಂ ಹಾಗೂ ಹಿಂದಿಯಲ್ಲಿ ಜೂನ್ 10 ರಂದು ರಿಲೀಸ್ ಆಗಲಿದೆ.

ಮಾನವನ ಭಾವನೆಗಳ ಮೇಲಿನ ಮೋಹದ ಬಗ್ಗೆ ಮಾತನಾಡಿದ ಕಿರಣರಾಜ್, ತನ್ನ ಜೀವನದಲ್ಲಿ ತಾನು ಈ ಹಂತಕ್ಕೆ ತಂದ ಹಾದಿಯ ಬಗ್ಗೆ ತಿಳಿಸಿದ್ದಾರೆ. ನಾನು 8 ವರ್ಷ ವಯಸ್ಸಿನವನಾಗಿದ್ದಾಗ ಪೇಪರ್ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಕುಟುಂಬದ ಸಮಸ್ಯೆಗಳು ಕಾಲೇಜಿಗೆ ಹೋಗುವ ನನ್ನ ಕನಸಿಗೆ ಕಡಿವಾಣ ಹಾಕಿತ್ತು. ಆ ನೋವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ನಾನು ಬಾರ್‌ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದೇನೆ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದೇನೆ. ನಾನು ಬಹಳಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ನಾನು ನಿದ್ದೆ ಮಾಡುವ ಮುನ್ನ ಅಳದ ದಿನವೇ ಇರಲಿಲ್ಲ. ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ಅನುಭವಿಸಿದ್ದೇನೆ ಎಂದು ತಿಳಸಿದ್ದಾರೆ.

ಅದಕ್ಕಾಗಿಯೇ ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ದೃಶ್ಯಗಳನ್ನು ಬರೆಯಲು ನನಗೆ ಸಾಧ್ಯವಾಯಿತು, ಸೆಟ್ ನಲ್ಲಿ ನಾನು ತುಂಬಾ ಕಠಿಣವಾಗಿ ವರ್ತಿಸಿರಬಹುದು, ಆದರೆ ಹೃದಯದಲ್ಲಿ ತುಂಬಾ ಭಾವನಾತ್ಮಕ ವ್ಯಕ್ತಿ ಎಂದು ಕಿರಣ್ ಹೇಳಿಕೊಂಡಿದ್ದಾರೆ.

ಭಾವನೆಗಳನ್ನು ಮುನ್ನೆಲೆಗೆ ತಂದಾಗ ಒಬ್ಬ ವ್ಯಕ್ತಿಯು ಬಲಶಾಲಿಯಾಗುತ್ತಾನೆ ಎಂದು ನಾನು ನಂಬುತ್ತೇನೆ. ಪ್ರೇಕ್ಷಕರು 777 ಚಾರ್ಲಿಯನ್ನು ವೀಕ್ಷಿಸುತ್ತಿದ್ದಾಗ ನಾನು ಅದನ್ನು ನೋಡಿದೆ ಎಂದು ತಿಳಿಸಿದ್ದಾರೆ.

ಬಾಲ್ಯದಲ್ಲಿ ನನ್ನ ಅಜ್ಜಿ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ಕಥೆಗಳನ್ನು ಕೇಳುವಾಗಲೂ, ನಾನು ಪಾತ್ರಗಳು ಮತ್ತು ದೃಶ್ಯಗಳನ್ನು ದೃಶ್ಯೀಕರಿಸುತ್ತಿದ್ದೆ.  ಈ ಮಹಾಕಾವ್ಯಗಳ ದೂರದರ್ಶನದ ಆವೃತ್ತಿಗಳನ್ನು ನಾನು ನೋಡಿದಾಗ, ನನ್ನ ತಲೆಯಲ್ಲಿನ ದೃಶ್ಯಗಳು ನಾನು ತೆರೆಯ ಮೇಲೆ ನೋಡುತ್ತಿರುವಂತೆಯೇ ಇರುವುದನ್ನು ನೋಡಲು ನಾನು ಉತ್ಸುಕನಾಗಿದ್ದೆ.

ನನ್ನ ಅಜ್ಜ-ಅಜ್ಜಿಯ ಕಥೆ ಕೇಳುತ್ತಿದ್ದ ನನಗೆ ಸಿನಿಮಾ ಪ್ರಪಂಚದೆಡೆಗೆ ಆಕರ್ಷಿಸಿತು. ನನ್ನ ತಾಳ್ಮೆ ಮತ್ತು ಪರಿಶ್ರಮ ಪ್ರತಿಫಲ ನೀಡಿದೆ. ನಾನು ಕೆಲವೇ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದರೂ ಅದು ಸುದೀರ್ಘ ಕಾಲ ಪ್ರಭಾವ ಬೀರುವಂತಿರಬೇಕು, ಹಲವು ವರ್ಷಗಳ ನಂತರವೂ ಪ್ರೇಕ್ಷಕರು ನೆನಪಿಟ್ಟುಕೊಳ್ಳಬೇಕು ಎಂಬುದು ನನ್ನಆಸೆ, ಚಾರ್ಲಿ 777 ಈ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆಯಾಗಿದ ಎಂದು ಎಂದು ಕಿರಣ್ ರಾಜ್ ತಿಳಿಸಿದ್ದಾರೆ.

           ಎಲ್ಲಕ್ಕಿಂತಲೂ ಹೆಚ್ಚು ಈ ಕಿರಣ್ ರಾಜ್ ನಮ್ಮ ಕಾಸರಗೋಡಿನವರು ಎಂಬುದು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries