ತಿರುವನಂತಪುರ: ದ್ವಿಚಕ್ರ ವಾಹನ ರೇಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ಆಂಟನಿ ರಾಜು ಮೋಟಾರು ವಾಹನ ಇಲಾಖೆಗೆ ಸೂಚಿಸಿದ್ದಾರೆ. ವಿಶೇಷ ಸೌಲಭ್ಯಗಳಿರುವ ರೇಸ್ ಟ್ರ್ಯಾಕ್ ನಲ್ಲಿ ನಡೆಯಲಿರುವ ಮೋಟಾರ್ ರೇಸ್ ಅನ್ನು ಸಾಮಾನ್ಯವಾಗಿ ಯುವಕರು ರಸ್ತೆಯಲ್ಲೇ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿರುವುದರಿಂದ ಈ ಸೂಚನೆ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಪಘಾತಗಳಿಂದ ಸಾಯುವವರÀಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಿದೆ. ‘ಆಪರೇಷನ್ ರೇಸ್’ ಎಂಬ ಹೆಸರಿನ ಈ ಪರೀಕ್ಷೆಯು ಎರಡು ವಾರಗಳ ಕಾಲ ನಡೆಯಲಿದ್ದು, ಬುಧವಾರ(ಇಂದಿನಿಂದ) ಆರಂಭವಾಗಲಿದೆ.
ಅಕ್ರಮವಾಗಿ ಸಂಚರಿಸುವ ವಾಹನಗಳ ಮಾರ್ಪಾಡು, ಅತಿ ವೇಗ ಮತ್ತು ಅಕ್ರಮ ನೋಂದಣಿÉಗೆ ಚಾಲಕರ ಪರವಾನಗಿ ರದ್ದು ಮತ್ತು ದಂಡ ವಿಧಿಸಲಾಗುತ್ತದೆ. ತಪಾಸಣೆ ವೇಳೆ ವಾಹನ ನಿಲ್ಲಿಸದ ವಾಹನ ಮಾಲೀಕರ ವಿಳಾಸದಲ್ಲಿ ದಂಡ ವಸೂಲಿ ಮಾಡಲಾಗುವುದು.





