HEALTH TIPS

ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಮಳೆ

                 ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಹೊಳೆ, ತೋಡುಗಳಲ್ಲಿ ನೀರಿನ ಮಟ್ಟ ಏರತೊಡಗಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಏಳುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ಕರಾವಳಿ ಪ್ರದೇಶದ ಜನರು ಜಾಗ್ರತೆ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. 

           ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವೆಡೆ ಸಂಚಾರ ದುಸ್ತರವೆನಿಸಿದೆ. ಮುಳ್ಳೇರಿಯ-ಚೆರ್ಕಳ ಹಾದಿಯಲ್ಲಿ ಶಾಂತಿನಗರದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಕೆಲಹೊತ್ತು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಅಭಿವೃದ್ಧಿ ಕಾರ್ಯ ನಡೆದುಬರುತ್ತಿರುವ ತಲಪ್ಪಾಡಿ-ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಹಾಗೂ  ಕುಂಬಳೆ-ಮುಳ್ಳೇರಿಯ  ರಾಜ್ಯ ಹೆದ್ದಾರಿ ಕಾಂಗಾರಿ ಸಂಪೂರ್ಣ ಅಯೋಮಯವಾಗಿದೆ.

ಕೇರಳದಲ್ಲಿ ಮುಂದಿನ ಐದು ದಿವಸಗಳ ಕಾಲ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ. ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದ್ದು, ಜುಲೈ 3ರ ವರೆಗೆ ಮುಂದುವರಿಯಲಿದೆ. 


             ಚಿತ್ರ ನಾಹಿತಿ: ಮುಳ್ಳೇರಿಯ-ಚೆರ್ಕಳ ಹಾದಿಯಲ್ಲಿ ಶಾಂತಿನಗರದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ನ ಸಂಚಾರಕ್ಕೆ ತಡೆಯುಂಟಾಯಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries