HEALTH TIPS

ಈ ಬಗೆಯ ತ್ವಚೆ ಸಮಸ್ಯೆ ಹಾಗೂ ಕೂದಲಿನ ಸಮಸ್ಯೆ ಇದ್ದರೆ ಟೀ ಟ್ರೀ ಆಯಿಲ್‌ ಬಳಸಿ

 ಹರಳೆಣ್ಣೆ, ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಹೀಗೆ ನಾನಾ ವಿಧಧ ಎಣ್ಣೆಗಳ ಬಗ್ಗೆ ಅವುಗಳಿಂದ ಸಿಗುವಂತಹ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಇದರಂತೆಯೇ ಟೀ ಟ್ರೀ ಎಣ್ಣೆಯೂ ಕೂಡಾ ಎಸೆಸ್ಶಿಯಲ್‌ ಆಯಿಲ್ ಅಂದರೆ ಸಾರಭೂತ ತೈಲವಾಗಿದ್ದು, ಇದರ ನಂಜು ನಿರೋಧಕ ಗುಣದಿಂದ ಹೆಚ್ಚಾಗಿ ಬಳಸಲ್ಪಡುತ್ತದೆ. ಟೀ ಟ್ರೀ ಆಯಿಲ್‌ ಎಂದರೆ ಸಾಮಾನ್ಯವಾಗಿ ನಾವು ಕುಡಿಯಲು ಬಳಸುವಂತಹ ಚಹಾ ಮರದ ತೈಲವೇ ಎಂದು ಅನೇಕರು ತಿಳಿದಿರಬಹುದು. ಆದರೆ ಚಹಾಗೂ, ಈ ಟೀ ಟ್ರೀಗೂ ತುಂಬಾ ವ್ಯತ್ಯಾಸವಿದೆ.

ಆಸ್ಟ್ರೇಲಿಯಾದ ದಕ್ಷಿಣ ಕರಾವಳಿಯ ಜೌಗು ಪ್ರದೇಶದಲ್ಲಿ ಬೆಳೆಯುವಂತಹ ಟೀ ಎನ್ನುವ ಮರದ ಎಲೆಗಳಿಂದ ತೆಗೆಯಲಾಗುವ ಸಾರಭೂತ ಅಂದರೆ ಎಸೆನ್ಶಿಯಲ್‌ ತೈಲವಾಗಿದೆ. ಮುಖ್ಯವಾಗಿ ಆಂಟಿವೈರಲ್‌, ಆಂಟಿಮೈಕ್ರೋಬು ಮತ್ತು ಆಂಟಿಬ್ಯಾಕ್ಟೀರಿಯಲ್‌ ಗುಣವನ್ನು ಹೊಂದಿರುವಂತಹ ಈ ಚಹಾ ಮರದ ಎಣ್ಣೆಯನ್ನು ಚರ್ಮದ ಸಮಸ್ಯೆಗಳಿಂದ ಹಿಡಿದು ಸೋಂಕು ನಿವಾರಕ ಔಷಧಿಯಾಗಿ ಬಳಸಲಾಗುತ್ತದೆ. ಈ ಟೀ ಟ್ರೀ ಎಣ್ಣೆಯ ಪ್ರಯೋಜನಗಳು ಮತ್ತು ಇದರ ಅಡ್ಡಪರಿಣಾಗಳ ಕುರಿತ ಮಾಹಿತಿ ಇಲ್ಲಿದೆ.

ಮೊಡವೆಗೂ ಮದ್ದು ಟೀ ಟ್ರೀ ಆಯಿಲ್‌

ಮುಖದಲ್ಲಿನ ಮೊಡವೆಗೆ ಸಾಮಾನ್ಯವಾಗಿ ಯಾವ ಔಷಧಿ ಮಾಡಿದರೂ, ಬೇಗನೆ ಹೋಗುವುದಿಲ್ಲ. ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದ್ದು, ಇದು ಮೊಡವೆ ಮತ್ತು ಇತರ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಮೇಲಿನ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ಮೊಡವೆ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಟೀ ಟ್ರೀ ಆಯಿಲ್‌ನ ಬಳಕೆಯು ಮೊಡವೆಗಳ ಪ್ರಮಾಣ ಮತ್ತು ಒಟ್ಟಾರೆ ತೀವ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೇ ಇದು ಮೊಡವೆಗಳ ವಿರುದ್ಧ ಅತ್ಯಂತ ಸಾಮಾನ್ಯವಾದ ಮೊಡವೆ-ವಿರೋಧಿ ಔಷಧಿಯಾದ ಬೆನ್ಝಾಯ್ಲ್ ಪೆರಾಕ್ಸೈಡ್ನಂತೆಯೇ ಪರಿಣಾಮಕಾರಿಯಾಗಿದೆ ಎನ್ನಲಾಗುತ್ತದೆ.

ಮುಖದಲ್ಲಿ ಮೊಡವೆಯಾಗಿದ್ದರೆಒಂದು ಭಾಗ ಟೀ ಟ್ರೀ ಎಣ್ಣೆಯನ್ನು ಒಂಬತ್ತು ಭಾಗಗಳ ನೀರಿನೊಂದಿಗೆ ಬೆರೆಸಿ ಮತ್ತು ದಿನಕ್ಕೆ ಒಂದು ಅಥವಾ ಎರಡು ಬಾರಿ ಹತ್ತಿಯಲ್ಲಿ ಅದ್ದಿ ಅದನ್ನು ಮೊಡವೆಯಿರುವ ಜಾಗಗಳಿಗೆ ಅನ್ವಯಿಸುವ ಮೂಲಕ ಮೊಡವೆಯನ್ನು ನಿವಾರಿಸಬಹುದು

ತಲೆಹೊಟ್ಟು ಸಮಸ್ಯೆಗೆ ಪರಿಹಾರ

ಟೀ ಟ್ರೀ ಆಯಿಲ್‌ನ ಮತ್ತೊಂದು ಉಪಯೋಗವೆಂದರೆ ಅದು ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ತೀವ್ರವಾದ ತಲೆಹೊಟ್ಟು ಸಮಸ್ಯೆಗಳ ಸಂದರ್ಭಗಳಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಸೌಮ್ಯದಿಂದ ಮಧ್ಯಮ ತಲೆಹೊಟ್ಟು ಸಮಸ್ಯೆ ಇರುವವರು ಚಹಾ ಮರದ ಎಣ್ಣೆಯನ್ನು ಬಳಸಬಹುದು.

ಶಿಲೀಂಧ್ರಗಳ ಸೋಂಕಿಗೆ ರಾಮಬಾಣ ಚಹಾ ಮರದ ಎಣ್ಣೆಯ ಮತ್ತೊಂದು ಉತ್ತಮ ಗುಣವೆಂದರೆ ಯೋನಿನಾಳದ ಯೀಸ್ಟ್‌ ಸೋಂಕನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಔಷಧವಾಗಿದೆ. ಯೋನಿನಾಳದಲ್ಲಿ ಯೀಸ್ಟ್‌ನ ಬೆಳವಣಿಗೆಯಿಂದ ಉಂಟಾಗುವ ಸೋಂಕು, ತುರಿಕೆ, ಕಿರಿಕಿರಿ, ಉರಿಯೂತಕ್ಕೆ ಕಾರಣವಾಗುತ್ತದೆ. ಈ ಟೀ ಟ್ರೀ ಎಣ್ಣೆಯು ಜೀವಕೋಶ ಪೊರೆಯನ್ನು ಹಾನಿಗೊಳಿಸಿ, ಅಲ್ಲಿ ಬೆಳೆದಿರುವಂತಹ ಯೀಸ್ಟ್‌ನ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಹಾಗಾಗಿ ಇದು ಶಿಲೀಂದ್ರಗಳ ಬೆಳವಣಿಗೆಯನ್ನು ನಿರ್ವಹಿಸಲು, ಸೋಂಕನ್ನು ತಡೆಗಟ್ಟಲು ಸಹಕಾರಿ,

ಗಾಯಗಳ ಸೋಂಕನ್ನು ತಡೆಗಟ್ಟುವ ಚಹಾ ಮರದ ಎಣ್ಣೆ ತರಚಿದ ಅಥವಾ ಬಿದ್ದಾಗ ಉಂಟಾಗುವ ಗಾಯಗಳು ಸೂಕ್ಷ್ಮಾಣುಗಳು ನಿಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸಲು ಅನುಮಾಡಿಕೊಡುತ್ತದೆ. ಹೀಗಾದಾಗ ಗಾಯವು ಒಂಗದೇ ಸೋಂಕು ಹೆಚ್ಚಾಗಬಹುದು. ಹೀಗಿದ್ದಾಗ ಟೀ ಟ್ರೀ ಆಯಿಲ್‌ನ ಬಳಕೆ ತೆರೆದ ಗಾಯಗಳಲ್ಲಿ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಮೂಲಕ ಗಾಯವು ಬೇಗನೆ ಗುಣವಾಗಲು ಸಹಕಾರಿ. ಗಾಯವು ಸೋಂಕಿನಿಂದ ಮುಕ್ತವಾಗಬೇಖೆಂದರೆ ಮೊದಲು ಗಾಯವಾದ ಸ್ಥಳವನ್ನು ನೀರಿನಿಂದ ಮತ್ತು ಸಾಬೂನಿನಿಂದ ಸ್ವಚ್ಛಗೊಳಿಸಿ, ಒಂದು ಟೀ ಚಮಚ ತೆಂಗಿನ ಎಣ್ಣೆಯೊಂದಿಗೆ, ಒಂದು ಹನಿ ಚಹಾ ಮರದ ಎಣ್ಣೆ ಮಿಶ್ರಣ ಮಾಡಿ, ಗಾಯಕ್ಕೆ ಹಚ್ಚಿ ಬ್ಯಾಂಡೇಜ್‌ ಹಾಕಿ.ಗಾಯ ಒಂಗುವವರೆಗೆ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಹೀಗೆ ಮಾಡಿ.

ನೈಸರ್ಗಿಕ ಸುಗಂಧದ್ರವ್ಯ ಟೀ ಟ್ರೀ ಆಯಿಲ್‌ನ ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳು ಬೆವರುವಿಕೆಯಿಂದ ಕಂಕುಳಿನಲ್ಲಿ ಉಂಟಾಗುವ ವಾಸನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆವರು ಸಾಮಾನ್ಯವಾಗಿ ವಾಸನೆ ಇರುವುದಿಲ್ಲ. ಆದರೆ, ನಿಮ್ಮ ಬೆವರು ಗ್ರಂಥಿಗಳಿಂದ ಸ್ರವಿಸುವಿಕೆಯು ನಿಮ್ಮ ಚರ್ಮದ ಮೇಲಿರುವ ಬ್ಯಾಕ್ಟೀರಿಯಾದೊಂದಿಗೆ ಸಂಯೋಜಿಸಿದಾಗ, ಮಧ್ಯಮದಿಂದ ಬಲವಾದ ವಾಸನೆಯು ಉತ್ಪತ್ತಿಯಾಗುತ್ತದೆ. ಟೀ ಟ್ರೀ ಆಯಿಲ್‌ನ ಬ್ಯಾಕ್ಟೀರಿಯಾ-ಹೋರಾಟದ ಗುಣಲಕ್ಷಣಗಳು ವಾಣಿಜ್ಯ ಸುಗಂಧದ್ರವ್ಯಗಳು ಮತ್ತು ಆಂಟಿಪೆರ್ಸ್ಪಿರಂಟ್‌ಗಳಿಗೆ ಸೂಕ್ತವಾದ ನೈಸರ್ಗಿಕ ಪರ್ಯಾಯವಾಗಿದೆ.. ಸುರಕ್ಷಿತ ಮತ್ತು ಪರಿಣಾಮಕಾರಿ ಡಿಯೋಡರೆಂಟ್ ತಯಾರಿಸಲು ಇದನ್ನು ಬಳಸಬಹುದು.

ಉಗುರಿನ ಸೋಂಕನ್ನು ನಿವಾರಿಸುವುದು ಸಾಮಾನ್ಯವಾಗಿ ಉಗುರಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ, ಉಗುರಿನ ಸೋಂಕು ಉಂಟಾಗುತ್ತದೆ. ಟೀ ಟ್ರೀ ಎಣ್ಣೆಯು ಉಗುರಿನ ಸೋಂಕುಗಳ ವಿರುದ್ಧ ಆಂಟಿಫಂಗಲ್ ಔಷಧಿಗಳಂತೆಯೇ ಪರಿಣಾಮಕಾರಿಯಾಗಿದೆ. ಇತರ ಉಗುರಿನ ಸೋಂಕಿನ ಔಷಧಿಗಳಿಗಿಂತ ಕಡಿಮೆ ಅಡ್ಡಪರಿಣಾಮವನ್ನು ಹೊಂದಿದ್ದು, ಇದು ಉಗುರಿನ ಶಿಲೀಂಧ್ರದ ಸಮಸ್ಯೆಯನ್ನು ನಿವಾರಿಸುವುದು. ಉಗುರಿನ ಶಿಲೀಂಧ್ರದ ಸಮಸ್ಯೆಯನ್ನು ಹೊಂದಿದ್ದಲ್ಲಿ, ನೀವು ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ಮಾತ್ರ ಬಳಸಿ ಅಥವಾ ಅದನ್ನು ಸಮಾನ ಪ್ರಮಾಣದ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಬಹುದು. ಶಿಲೀಂಧ್ರವು ಇತರ ಪ್ರದೇಶಗಳಿಗೆ ಹರಡುವುದನ್ನು ತಪ್ಪಿಸಲು ಅನ್ವಯಿಸಿದ ತಕ್ಷಣ ನಿಮ್ಮ ಕೈಗಳನ್ನು ತೊಳೆಯಲು ಮರೆಯದಿರಿ.

ಸೋರಿಯಾಸಿಸ್‌ಗೆ ಪರಿಣಾಮಕಾರಿ ಔಷಧ ಸೋರಿಯಾಸಿಸ್ ಒಂದು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು. ಇದರಿಂದಾಗಿ ಚರ್ಮದಲ್ಲಿ ಕೆಂಪು, ತುರಿಕೆ ಕಾಣಿಸಿಕೊಳ್ಳುತ್ತದೆ ಮತ್ತು ಚರ್ಮವು ಪದರು ಪದರಾಗಿ ಬಿಳಿ ಅಥವಾ ಕೆಂಪಗಾಗುತ್ತದೆ. ಇದು ದೀರ್ಘಕಾಲದ ಸಮಸ್ಯೆಯಾಗಿದ್ದು, ಇದಕ್ಕೆ ಸಂಪೂರ್ಣ ಪರಿಹಾರವಿಲ್ಲ. ಇದರ ರೋಗಲಕ್ಷಣಗಳನ್ನು ಮಾತ್ರ ಸುಧಾರಿಸಿ, ನಿಯಂತ್ರಿಸಬಹುದು. ಈ ನಿಯಂತ್ರಣ ಚಿಕಿತ್ಸೆಯಲ್ಲಿ ಟೀ ಟೀ ಆಯಿಲನ್ನು ಬಳಸಬಹುದು. ಟೀ ಟ್ರೀ ಆಯಿಲ್ ಉರಿಯೂತದ ಸಂಯುಕ್ತಗಳನ್ನು ಹೊಂದಿದ್ದು, ಅಧ್ಯಯನಗಳ ಪ್ರಕಾರ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯಕವಾಗಗುತ್ತದೆ.ಸೋರಿಯಾಸಿಸ್ ಉಲ್ಬಣಗಳಿಗೆ ಪರಿಹಾರವನ್ನು ಒದಗಿಸಲು, 10-15 ಹನಿ ಟೀ ಟ್ರೀ ಎಣ್ಣೆಯನ್ನು 2 ಟೇಬಲ್‌ ಚಮಚ ಕರಗಿದ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಅಗತ್ಯವಿದ್ದಲ್ಲಿ ದಿನಕ್ಕೆ 2-3 ಬಾರಿ ಪೀಡಿತ ಭಾಗಕ್ಕೆ ಇದನ್ನು ಹಚ್ಚಿ.

ಟೀ ಟ್ರೀ ಆಯಿಲ್‌ನ ಅಡ್ಡ ಪರಿಣಾಮಗಳು ಅತಿಯಾಗಿ ಬಳಸಿದರೆ ಎಲ್ಲವೂ ಕೂಡಾ ಅಡ್ಡಪರಿಣಾಮವನ್ನು ಬೀರುತ್ತದ. ಇದರಲ್ಲಿ ಟೀ ಟ್ರೀ ಆಯಿಲ್‌ ಕೂಡಾ ಹೊರತಾಗಿಲ್ಲ, ಇದನ್ನ ಹೆಚ್ಚಾಗಿ ಬಳಸುವುದರಿಂದ ಕೆಲವು ತೀವ್ರವಾದ ಅಡ್ಡಪರಿಣಾಮಗಳು ಉಂಟಾಗಬಹುದು. ಅವೆಂದರೆ, * ಯಾವುದೇ ರೀತಿಯ ಸುಟ್ಟಗಾಯಗಳಾದಾಗ ಚಹಾ ಮರದ ಎಣ್ಣೆಯನ್ನು ಎಂದಿಗೂ ಹಚ್ಚಬೇಡಿ. ಏಕೆಂದರೆ ಅದರ ಬಿಸಿ ಸಾಮರ್ಥ್ಯದಿಂದಾಗಿ ಇದು ಸುಡುವ ಸಂವೇದನೆಯನ್ನು ಹೆಚ್ಚಿಸುತ್ತದೆ. * ಹಾಲುಣಿಸುವ ತಾಯಂದಿರಿಗೆ ಚಹಾ ಮರದ ಎಣ್ಣೆಯ ಸಲಹೆ ನೀಡಲಾಗುವುದಿಲ್ಲ, ತಜ್ಞರ ಪ್ರಕಾರ, ಚಹಾ ಮರದ ಎಣ್ಣೆಯನ್ನು ವೈದ್ಯರ ಸಲಹೆಯೊಂದಿಗೆ ಮಾತ್ರ ಹಾಲುಣಿಸುವ ತಾಯಂದಿರು ಬಳಸಬೇಕು. * ಕೆಲವೊಮ್ಮೆ, ಟೀ ಟ್ರೀ ಆಯಿಲ್ ಬಳಕೆಯು ಶುಷ್ಕತೆಗೆ(ಒಣ ತ್ವಚೆಗೆ) ಕಾರಣವಾಗಬಹುದು, ಆದ್ದರಿಂದ ನೀವು ಶುಷ್ಕ ಚರ್ಮವನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರ ಚಹಾ ಮರದ ಎಣ್ಣೆಯನ್ನು ಬಳಸಿ. *ಚಹಾ ಮರದ ಎಣ್ಣೆಯನ್ನು ಎಂದಿಗೂ ಆಂತರಿಕವಾಗಿ ಬಳಸಬಾರದು. ನೀವು ಅದನ್ನು ಸೇವಿಸಿದರೆ ಅದು ವಿಷಕಾರಿ ಮತ್ತು ಮಾರಣಾಂತಿಕವಾಗಬಹುದು. ಒಂದು ವೇಳೆ ಸೇವಿಸಿದರೆ ತೂಕಡಿಕೆ, ಗೊಂದಲ, ಚಲನೆಯಲ್ಲಿ ನಿಯಂತ್ರಣವಿಲ್ಲದಿರುವುದು ಹಾಗೂ ಪ್ರಜ್ಞೆ ತಪ್ಪಬಹುದು. * ಟೀ ಟ್ರೀ ಎಣ್ಣೆಯನ್ನು ಅರೋಮಾ ಚಿಕಿತ್ಸೆಯಲ್ಲೂ ಬಳಸಲಾಗುತ್ತಿದ್ದು, ಇದರ ಉಸಿರಾಟದಿಂದ ತಲೆನೋವು, ವಾಕರಿಕೆ, ತಲೆಸುತ್ತು ಉಂಟಾಗಬಹುದು. * ಟೀ ಟ್ರೀ ಆಯಿಲ್ ಕ್ಯಾನ್ಸರ್, ಉರಿಯೂತ ನಿವಾರಕ, ಪ್ರತಿಜೀವಕಗಳು ಮತ್ತು ಆಂಟಿಫಂಗಲ್‌ನಂತಹ ದೀರ್ಘಕಾಲದ ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಜನರ ಮೇಲೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಟೀ ಟ್ರೀ ಆಯಿಲ್ ಮಿತವಾಗಿ ಬಳಸಿ. ಸಂದೇಹಗಳಿದ್ದರೆ ಅವಶ್ಯವಾಗಿ ವೈದ್ಯರ ಸಲಹೆ ಪಡೆಯಿರಿ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries