HEALTH TIPS

ಆರೋಗ್ಯ, ಜ್ಞಾನ ಹಾಗೂ ಮನಸಿನ ಏಕಾಗ್ರತೆಯನ್ನು ಬೆಳೆಸುವಲ್ಲಿ ಯೋಗ ಪ್ರಧಾನ ಪಾತ್ರವಹಿಸುತ್ತದೆ: ಸಾಧ್ವಿ ಶ್ರೀ ಮಾತಾನಂದಮಯಿ: ಯೋಗಾ ಫಾರ್ ಕಿಡ್ಸ್ ವಾರ್ಷಿಕೋತ್ಸವದಲ್ಲಿ ಆಶೀರ್ವಚನ

                                            

                ಕಾಸರಗೋಡು: ಆರೋಗ್ಯ, ಜ್ಞಾನ ಹಾಗೂ ಮನಸಿನ ಏಕಾಗ್ರತೆಯನ್ನು ಬೆಳೆಸುವಲ್ಲಿ ಯೋಗ ಪ್ರಧಾನ ಪಾತ್ರವಹಿಸುತ್ತದೆ. ಬುದ್ಧಿ, ದೇಹ, ಮನಸುಗಳನ್ನು ಆರೋಗ್ಯವಂತವಾಗಿರಿಸುವ ಕಲೆ ಯೋಗ. ಯೋಗದಿಂದ ರೋಗಮುಕ್ತ ಜೀವನ ಸಾಧ್ಯ. ಬದುಕಿನಲ್ಲಿ ಶಿಸ್ತು, ಸಂಯಮ ತಂದು ಸುಸಂಸ್ಕøತವಾಗಿಸುವ ಯೋಗವನ್ನು ಪ್ರತಿಯೊಬ್ಬರೂ ಅಭ್ಯಸಿಸಬೇಕು. ಆ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ಸಾರುವ ಯೋಗಾ ಫಾರ್ ಕಿಡ್ಸ್ ನ ಪ್ರಯತ್ನ ಶ್ಲಾಘನೀಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿ  ಇವರು ನುಡಿದರು. 

          ಅವರು ಯೋಗಾ ಫಾರ್ ಕಿಡ್ಸ್ ಕಾಸರಗೋಡು ಇದರ ವಾರ್ಷಿಕೋತ್ಸವ, ಯೋಗ ಪ್ರದರ್ಶನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ  ಉದ್ಘಾಟಿಸಿ ಆಶೀರ್ವಚನ ನೀಡಿದರು.              ದೂರದೃಷ್ಟಿಯ ಯೋಜನೆಗಳು, ಪರಿಶ್ರಮಗಳಿಂದ  ಕೂಡಿದ ಸಂಸ್ಥೆಯ ಮಕ್ಕಳ ಸಾಧನೆ  ಇತರರಿಗೂ ಪ್ರೇರಣೆಯಾಗಲಿ ಎಂದರು.


                     ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಬಿಂದು ಜ್ಯುವೆಲ್ಲರಿಯ ಆಡಳಿತ ಪಾಲುದಾರ ಅಭಿಲಾಷ್ ಮಾತನಾಡಿ, ವೇಗದ ಬದುಕಿನಲ್ಲಿ ಶಿಸ್ತಿನ ಜೀವನ ಶೈಲಿಯನ್ನು ರೂಢಿಸಿಕೊಂಡು ನೆಮ್ಮದಿಯನ್ನು ಹೊಂದಲು ಯೋಗ ಅತಿ ಮುಖ್ಯ. ಉತ್ತಮ ಹವ್ಯಾಸಗಳನ್ನು ಮಕ್ಕಳಲ್ಲಿ ತುಂಬಲು ಎಂದೂ ಹಿಂಜರಿಬಾರದು. ಯೋಗಾ ಫಾರ್ ಕಿಡ್ಸ್ ನ ಚಟುವಟಿಕೆಗಳಿಗೆ ಸದಾ ತನ್ನ ಬೆಂಬಲವಿದೆ ಎಂದರು. ಮಕ್ಕಳ ತಜ್ಞೆ ಡಾ.ರೇಖಾ ರೈ  ಮಾತನಾಡಿ ವೈಜ್ಞಾನಿಕ ಯುಗದಲ್ಲಿ ಯಾಂತ್ರಿಕವಾಗುತ್ತಿರುವ ಬದುಕಿಗೆ ಕ್ರಿಯಾಶೀಲತೆಯನ್ನು ನೀಡುವ ಯೋಗವನ್ನು ಮನೆಮಂದಿಯೆಲ್ಲರೂ ಒಟ್ಟಾಗಿ ಮಾಡಬೇಕು.ಆ ಮೂಲಕ ಮನೆ ಹಾಗೂ ಮನಸ್ಸುಗಳಲ್ಲಿ ಬಾಂಧವ್ಯವೂ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು. 

                 ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಅಖಿಲೇಶ್ ನಗುಮುಗಂ ಅವರನ್ನು  ಅಭಿನಂದಿಸಲಾಯಿತು. ವೇದಿಕೆಯಲ್ಲಿ ಮಹಾಜನ ಸಂಸ್ಕೃತ ವಿದ್ಯಾಲಯದ ವ್ಯವಸ್ಥಾಪಕರಾದ ಜಯದೇವ ಖಂಡಿಗೆ, ಧಾರ್ಮಿಕ ಸಾಮಾಜಿಕ ಮುಖಂಡ ಗಂಗಾಧರ ಆಳ್ವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಆಯಿಷಾ ಪೆರ್ಲ, ಯಕ್ಷಗಾನ ಕಲಾವಿದ ಮುಕುಂದರಾಜ್, ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಪೆÇ್ರ.ಶ್ರೀನಾಥ್, ಸಾಹಿತಿ ಉದನೇಶ್ವರ ಭಟ್ ಬದಿಯಡ್ಕ, ಉಪಸ್ಥಿತರಿದ್ದು ಶುಭಾಶಂಸನೆಗೈದರು. 

ಅಸಕ್ತ ಕುಟುಂಬದ  ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಉಚಿತವಾಗಿ  ಕಲಿಕೋಪಕರಣಗಳನ್ನು ವಿತರಿಸಲಾಯಿತು. ಮಾತ್ರವಲ್ಲದೆ ಯೋಗಾ ಫಾರ್ ಕಿಡ್ಸ್ ವಿದ್ಯಾರ್ಥಿಗಳ ಯೋಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳ ಪೆÇೀಷಕರು ಯೋಗ ಗುರು ತೇಜಾಕುಮಾರಿಯವರನ್ನು ಅಭಿನಂದಿಸಿದರು. ಯೋಗಾ ಫಾರ್ ಕಿಡ್ಸ್ ನ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಮಾತಾನಂದಮಯಿಯವರು ಶಾಲು ಹೊದಿಸಿ ಗೌರವಿಸಿದರು. ಅನ್ವಿತಾ ಕಾಮತ್ ಪ್ರಾರ್ಥನೆ ಹಾಡಿದರು. ವಿದ್ಯಾಗಣೇಶ್ ಸ್ವಾಗತಿಸಿ ತೇಜಾಕುಮಾರಿ ಧನ್ಯವಾದ ಸಮರ್ಪಿಸಿದರು.  ಯಕ್ಷಗಾನ ಕಲಾವಿದ, ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವಸಂತ ಬಾರಡ್ಕ, ಮುರಳಿ ನೀರ್ಚಾಲ್, ಮಧು, ಮಮತಾ ಆಚಾರ್ಯ, ಉಷಾವೇಣು ಮುಂತಾದವರು ಸಹಕಾರ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries