ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಪ್ರವೇಶ ಸಮಾರಂಭ ಎಸ್‍ಜಿಎ ಎಲ್‍ಪಿ ಶಾಲೆ ಮುಳ್ಳೇರಿಯದಲ್ಲಿ ನಡೆಯಿತು. ಸಮಾರಂಭವನ್ನು ಕಾಸರಗೋಡು ಶಾಸಕ ಎನ್‍ಎ ನೆಲ್ಲಿಕುನ್ನು ಉದ್ಘಾಟಿಸಿದರು. ಶಾಲೆಯಲ್ಲಿ ಸಿದ್ಧಪಡಿಸಿದ್ದ ಅಕ್ಷರ ಮರದ ಮೇಲೆ ಶಾಸಕರು ಪತ್ರ ಬರೆದು ಚಾಲನೆ ನೀಡಿದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನ್ಯಾಯವಾದಿ. ಕೆ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಬಳಪ, ಸ್ಲೇಟು, ನೋಟ್ ಬುಕ್, ಸಮವಸ್ತ್ರ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ.ಶಫೀಕ್, ಕಾಸರಗೋಡು ಡಿಪಿಒ ಕೆ.ಪಿ.ರಂಜಿತ್, ಮಾಯಿಪ್ಪಾಡಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಶಿಕ್ಷಕ ಡಾ. ಎ.ಪ್ರಸನ್ನ, ಕಾರಡ್ಕ ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರತ್ನಾಕರ, ಕಾರಡ್ಕ ಗ್ರಾ.ಪಂ.ಸದಸ್ಯ ಸಿ.ಎನ್.ಸಂತೋಷ್, ಮುಳ್ಳೇರಿಯ ಜಿ.ವಿ.ಎಚ್.ಎಸ್.ಎಸ್ ಮುಖ್ಯೋಪಾಧ್ಯಾಯಿನಿ ಪದ್ಮಾ, ಮುಳ್ಳೇರಿಯ ಎ.ಯು.ಪಿ.ಶಾಲಾ ಮುಖ್ಯಶಿಕ್ಷಕ ಅಶೋಕ ಅರಳಿತ್ತಾಯ, ಮುಳ್ಳೇರಿಯ ಜಿ.ಎ.ಎಲ್.ಪಿಎಸ್ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷ ಶರೀಫ್, ಮುಳ್ಳೇರಿಯ ಎಸ್.ಜಿ.ಎ.ಎಲ್.ಪಿಎಸ್ ಶಾಲಾ ಮಾತೃಸಂಘದ ಅಧ್ಯಕ್ಷೆ ಅರ್ಚನಾ ರಾವ್, ಮುಳ್ಳೇರಿಯ ಎಸ್.ಜಿ.ಎ.ಎಲ್.ಪಿಎಸ್ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಾ ಕನ್ನೋತ್, ಮುಳ್ಳೇರಿಯ ಎಸ್.ಜಿ.ಎ.ಎಲ್.ಪಿಎಸ್ ಶಾಲಾ ಮುಖ್ಯ ಶಿಕ್ಷಕ ರಘುರಾಮ ಬಲ್ಲಾಳ್, ಮುಳ್ಳೇರಿಯ ಎಸ್‍ಜಿಎಎಲ್‍ಪಿಎಸ್ ವ್ಯವಸ್ಥಾಪಕ ಕೆ.ಆರ್.ಸಶಿಕುಮಾರ್, ಎಸ್‍ಜಿಎಎಲ್‍ಪಿಎಸ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಮಾನಂದ ರಾವ್ ಮಾತನಾಡಿದರು. ಕುಂಬಳೆ ಉಪಜಿಲ್ಲಾ ಎಇಒ ಯತೀಶ್ ಕುಮಾರ್ ರೈ ಸ್ವಾಗತಿಸಿ, ಕುಂಬಳೆ ಬಿಆರ್‍ಸಿಯ ಬಿಪಿಸಿ ಜೆ ಜಯರಾಮ್ ವಂದಿಸಿದರು.




.jpg)
.jpg)
