HEALTH TIPS

ನದಿ ಜೋಡಣೆಯಿಂದ ಮಾನ್ಸೂನ್​ಗೆ ಧಕ್ಕೆ; ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ

 ನವದೆಹಲಿ: ನದಿಗಳ ಜೋಡಣೆಯಿಂದ ಮಾನ್ಸೂನ್ ಚಕ್ರಗಳು ಮತ್ತು ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸಾಮಾಜಿಕ-ಆರ್ಥಿಕ ಸವಾಲುಗಳನ್ನೂ ಒಡ್ಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬುಂದೇಲ್​ಖಂಡ್​ನಲ್ಲಿ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕೆನ್ ಮತ್ತು ಬೆತ್ವಾ ನದಿಗಳನ್ನು ಜೋಡಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ.

ಇದು ರಾಷ್ಟ್ರೀಯ ನದಿ ಜೋಡಣೆ ಯೋಜನೆ (ಎನ್​ಆರ್​ಎಲ್​ಪಿ) ಅಡಿ ತರಲಾಗುತ್ತಿರುವ ಮೊದಲ ಯೋಜನೆಯಾಗಿದೆ. ಈ ಯೋಜನೆಯಿಂದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ವ್ಯಾಪಿಸಿರುವ ಬುಂದೇಲ್​ಖಂಡ್​ನಲ್ಲಿ ಸುಮಾರು 11 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು ಎಂದು ಹೇಳಲಾಗಿದೆ. ಅಂತರ್ ಜಲಾನಯನ ನೀರಿನ ವರ್ಗಾವಣೆ ಯೋಜನೆ ಮೂಲಕ ಬರ ಮತ್ತು ನೀರಿನ ಕೊರತೆ ಇರುವ ಪ್ರದೇಶಗಳಿಗೆ ನೀರು ಹೆಚ್ಚಿರುವ ಜಲಾನಯನ ಪ್ರದೇಶಗಳಿಂದ ನೀರನ್ನು ವರ್ಗಾಯಿಸುವ ಉದ್ದೇಶವನ್ನು ಎನ್​ಆರ್​ಎಲ್​ಪಿ ಹೊಂದಿದೆ.

ತೀವ್ರ ಮಟ್ಟದಲ್ಲಿ ಪರಿಣಾಮ: ನದಿ - ಸಂಪರ್ಕ ಯೋಜನೆಗಳ ದೀರ್ಘಕಾಲೀನ ಪ್ರತಿಕೂಲ ಪರಿಣಾಮಗಳನ್ನು ದೃಶ್ಯೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ಪ್ರತಿಕೂಲ ಪರಿಣಾಮಗಳು ತೀವ್ರ ಮಟ್ಟದಲ್ಲಿರುತ್ತವೆ ಎಂದು ಯಮುನಾ ನದಿ ಮತ್ತು ಅದರ ಪ್ರವಾಹ ಪ್ರದೇಶಗಳನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಯಮುನಾ ಜಿಯೆ ಅಭಿಯಾನದ ಸಂಚಾಲಕ ಮನೋಜ್ ಮಿಶ್ರಾ ಹೇಳಿದ್ದಾರೆ. ಉದಾಹರಣೆಗೆ ಕೆನ್-ಬೆತ್ವಾದಲ್ಲಿ ಅವುಗಳ ಮೂಲವು ತುಂಬಾ ವಿಭಿನ್ನವಾಗಿವೆ. ಕೆನ್ ನದಿಯು ಔಷಧದ ಗುಣ ಹೊಂದಿರುವ ವಿಶಿಷ್ಠ ಮೀನುಗಳನ್ನು ಹೊಂದಿದೆ. ಈ ಮೀನುಗಳು ಬೆತ್ವಾದಲ್ಲಿ ಕಂಡುಬರುವುದಿಲ್ಲ. ಕೆನ್ ನೀರನ್ನು ಬೆತ್ವಾಗೆ ತಿರುಗಿಸಿದರೆ ಮೀನು ಮತ್ತು ಇತರೆ ಜೀವವೈವಿಧ್ಯತೆಗಳು ಸಹ ಚಲಿಸುತ್ತವೆ. ಚಲಿಸಿದಾಗ ಅದು ಸ್ಥಳೀಯ ಮೀನುಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಳೆ ಮೇಲೆ ಪರಿಣಾಮ: ಮನೋಜ್ ಮಿಶ್ರಾ ಅವರ ಹೇಳಿಕೆಗೆ ಮತ್ತೊಬ್ಬ ತಜ್ಞ ಹಿಮಾಂಶು ಠಕ್ಕರ್ ದನಿಗೂಡಿಸಿದ್ದಾರೆ. ಸಮುದ್ರದ ಉಷ್ಣ ಮತ್ತು ಲವಣಾಂಶದ ಗ್ರೇಡಿಯಂಟ್, ಮಾನ್ಸೂನ್​ನ ಎರಡು ಚಾಲಕರು. ಇದು ನದಿ ಸಂಪರ್ಕ ಯೋಜನೆಗಳಿಂದ ತೊಂದರೆಗೊಳ ಗಾಗಬಹುದು ಎಂದು ಅವರು ಹೇಳಿದ್ದಾರೆ. ನದಿ ಜೋಡಣೆಯು ಹೊಸ ಪರಿಕಲ್ಪನೆಯಲ್ಲ. 1960ರ ದಶಕದಲ್ಲಿ ಬಿಯಾಸ್ -ಸಟ್ಲೆಜ್ ನೀರಾವರಿಗಾಗಿ ದೊಡ್ಡ ಪ್ರಮಾಣದ ನೀರಿನ ಪೂರೈಕೆಗಾಗಿ ಅಂತರ್ -ಸಂಪರ್ಕಗೊಂಡಾಗ ಅದನ್ನು ಜಾರಿಗೆ ತರಲಾಯಿತು ಎಂದು ಮತ್ತೊಬ್ಬ ತಜ್ಞ ಹಿಮಾಚಲ ಪ್ರದೇಶ ಮೂಲದ ಮಾನ್ಸಿ ಅಹ್ಸರ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries