HEALTH TIPS

ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಇಬ್ಬರು ಚೀನಾ ಪ್ರಜೆಗಳ ಬಂಧನ

 ಸೀತಾಮಡಿವೀಸಾ ದಾಖಲೆಯಿಲ್ಲದೆ, ಭಾರತವನ್ನು ನುಸುಳಿ ಸುಮಾರು 15 ದಿನಗಳ ಕಾಲ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲಿ ವಾಸವಾಗಿದ್ದ ಚೀನಾದ ಇಬ್ಬರು ನಾಗರಿಕರನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹರಕಿಶೋರ್ ರಾಯ್ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಮಾತನಾಡಿದ ಸೀತಾಮಡಿಯ ಎಸ್‌ಪಿ ಹರಕಿಶೋರ್ ರಾಯ್, 'ಬಂಧಿತ ಆರೋಪಿಗಳು ಬಿಹಾರದ ಮೂಲಕ ನೇಪಾಳಕ್ಕೆ ತೆರಳಲು ಯತ್ನಿಸುತ್ತಿದ್ದರು. ಈ ವೇಳೆ ಅವರು ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಸಿಬ್ಬಂದಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರ ಬಳಿ ಚೀನಾದ ಪಾಸ್‌ಪೋರ್ಟ್ ಪತ್ತೆಯಾಗಿದ್ದು, ವೀಸಾಗಳು ಇರಲಿಲ್ಲ. ಜೊತೆಗೆ ಅವರ ಮೊಬೈಲ್ ದತ್ತಾಂಶ ಮತ್ತು ಇತರೆ ಅಂಶಗಳನ್ನು ಪರಿಶೀಲಿಸಿದಾಗ, ಹಣಕಾಸಿನ ವಂಚನೆ ಜಾಲದಲ್ಲೂ ಈ ಇಬ್ಬರ ಪಾತ್ರ ಇರುವ ಬಗ್ಗೆ ಸಾಕ್ಷಿಗಳು ಪತ್ತೆಯಾಗಿದೆ' ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries