ತಿರುವನಂತಪುರ: ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಗೆ ಒಲಿಂಪಿಯನ್ ಪಿಟಿ ಉಷಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಯುವಜನತೆ ಸೈನಿಕರಾಗಲು ರಕ್ಷಣಾ ಸಚಿವಾಲಯದಲ್ಲಿ ಈಗ ಉತ್ತಮ ಅವಕಾಶ ಸಿಕ್ಕಿದೆ ಎಂದಿದ್ದಾರೆ ಪಿಟಿ ಉಷಾ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪಿಟಿ ಉಷಾ ಅವರು ಅಗ್ನಿಪಥ್ ಯೋಜನೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
‘ಶಿಸ್ತು ಮತ್ತು ಸಮರ್ಪಣಾ ಮನೋಭಾವವು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಅಂಶಗಳಾಗಿವೆ. ಶಿಸ್ತು ಇಲ್ಲದೆ ನಾವು ಎಂದಿಗೂ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯವಿಲ್ಲ. ಸಮರ್ಪಣೆಯಿಲ್ಲದೆ ಎಂದಿಗೂ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಹೌದು, ರಕ್ಷಣಾ ಸಚಿವಾಲಯ ಈಗ ಸೈನಿಕನಾಗುವ ಅವಕಾಶವನ್ನು ನೀಡಿದೆ. ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡಬೇಕು. ಅಗ್ನಿಪಥ್ ನ ಭಾಗವಾಗಿರಿ. ಹೆಮ್ಮೆಯ ಸೇನಾನಿಗಳಾಗಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತುಂಬಾ ಒಳ್ಳೆಯದು, ”ಎಂದು ಪಿಟಿ ಉಷಾ ಹೇಳುತ್ತಾರೆ.
ಯೋಜನೆ ವಿರುದ್ಧ ಕೆಲವೆಡೆ ಸುಳ್ಳು ಪ್ರಚಾರ ಮಾಡಿದರೂ ಯೋಜನೆ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಹೇಳಿತ್ತು. ಸೇನೆ ಮತ್ತು ವಾಯುಪಡೆಯು ಅಗ್ನಿಪಥ್ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಶುಕ್ರವಾರದಿಂದ ಜುಲೈ 5 ರವರೆಗೆ ಏರ್ ಫೋರ್ಸ್ ನೋಂದಣಿಯನ್ನು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು 24 ರಂದು ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಸೇನಾ ನೋಂದಣಿ ಮುಂದಿನ ತಿಂಗಳು ನಡೆಯಲಿದೆ.




