HEALTH TIPS

ಸಂಗೀತದಂತಹ ಕಲೆಗಳು ಮನಸ್ಸನ್ನು ಅರಳಿಸುತ್ತದೆ: ಜೀನ್ ಲವೀನೊ ಮೊಂತೇರೊ: ರಾಗಸುಧಾ ಸಂಗೀತಶಾಲಾ ವಾರ್ಷಿಕೋತ್ಸವದಲ್ಲಿ ಅಭಿಮತ

     

          ಮಂಜೇಶ್ವರ: ಸಂಗೀತದಂತಹ ಕಲೆಗಳು ಮನುಷ್ಯ ಮನಸ್ಸನ್ನು ಅರಳಿಸಿ ಚೇತನಗೊಳಿಸುತ್ತದೆ ಎಂದು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೇರೊ ತಿಳಿಸಿದರು.

             ವಾಮಂಜೂರು ಚೆಕ್ ಪೋಸ್ಟ್ ಬಳಿಯಿರುವ ಗುರುನರಸಿಂಹ ಸಭಾ ಭವನದಲ್ಲಿ ಮಂಗಳವಾರ ಸಂಜೆ ನಡೆದ ಶಾಸ್ತ್ರೀಯ ಸಂಗೀತ ಕಲಿಕಾ ಸಂಸ್ಥೆ ರಾಗಸುಧಾ ಅಂಗಡಿಪದವು ಇದರ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ದಿ.ಡಾ.ಕೆ.ಗೋವಿಂದ ಭಟ್ ಅವರ ಪ್ರಥಮ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಮನುಷ್ಯ ಜೀವನದ ಅವಿಭಾಜ್ಯ ಅಂಗಗಳಲ್ಲಿ ಮನಸ್ಸಿಗೆ ಹುರುಪು ತರುವ ಬದುಕಿಗೆ ಜೀವನೋತ್ಸಾಹ ಹೆಚ್ಚಿಸುವ ವಿಶೇಷ ಶಕ್ತಿ ಸಂಗೀತಕ್ಕಿದೆ. ಆರೋಗ್ಯ ವರ್ಧನೆಯಲ್ಲಿ ಸಂಗೀತತದ ಪಾತ್ರ ಮಹತ್ತರವಾದುದು. ಪೋಷಕರು ತಮ್ಮ ಮಕ್ಕಳನ್ನು ಸಂಗೀತ, ನೃತ್ಯ ಶಾಲೆಗಳಿಗೆ ಕಳಿಸುವುದರ ಮೂಲಕ ಅವರಲ್ಲಿನ ಅ|ಭಿಜಾತ ಶಕ್ತಿಯನ್ನು ಉದ್ದೀಪನ ಗೊಳಿಸಿ ಹೊರತರುವ ಪ್ರಯತ್ನ ಮಾಡಬಹುದು ಎಂದು ಅವರು ಕರೆನೀಡಿದರು. 

            ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಆಶೀರ್ವಚನ ನೀಡಿ, ಎಂತವರನ್ನೂ ತನ್ನತ್ತ ಸೆಳೆಯುವ ಮಾಂತ್ರಿಕ ಶಕ್ತಿ ಸಂಗೀತದ ಹೆಗ್ಗಳಿಕೆಯಾಗಿದೆ ಎಂದರು.

           ಈ ಸಂದರ್ಭ ದೈಗೋಳಿ ಶ್ರೀಸತ್ಯಸಾಯಿ ಸೇವಾಶ್ರಮದ ರೂವಾರಿ ಡಾ.ಉದಯಕುಮಾರ್ ನೂಜಿ ಹಾಗೂ ಡಾ. ಶಾರದಾ ಉದಯಕುಮಾರ್ ದಂಪತಿಗಳನ್ನು ಶಾಲುಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿರಿಯ ವೈದ್ಯ ಡಾ.ಶ್ರೀಧರ ಭಟ್ ಉಪ್ಪಳ, ಯಕ್ಷ ಬಳಗ ಹೊಸಂಗಡಿಯ ಸಂಸ್ಥಾಪಕ ಸಂಕಬೈಲು ಸತೀಶ ಅಡಪ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಅ|ಧ್ಯಕ್ಷ ಬಶೀರ್ ಕನಿಲ ಅವರು ದಿ.ಡಾ.ಕೆ.ಗೋವಿಂದ ಭಟ್ ಅವರೊಂದಿಗಿನ ಒಡನಾಟಗಳನ್ನು ನೆನಪಿಸಿದರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಗುರುನರಸಿಂಹ ದತ್ತಿಮಂಡ|ಳಿಯ ಶಂಕರನಾರಾಯಣ ಹೊಳ್ಳ, ಹೊಸಂಗಡಿ ಅಯ್ಯಪ್ಪ ಮಂದಿರದ ಅಧ್ಯಕ್ಷ ಪದ್ಮನಾಭ ಕಡಪ್ಪರ, ಡಾ.ಸತ್ಯನಾರಾಯಣ ಜಿ, ಸಂಗೀತ ಗುರು ಶಿಲ್ಪಾ ವಿಶ್ವನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು. 

                   ರಾಗಸುಧಾದ ಜೂನಿಯರ್ ಸಂಗೀತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ 11 ಮಂದಿ ವಿದ್ಯಾರ್ಥಿಗಳಿಗೆ ಗಣ್ಯರು ನೆನಪಿನ ಕಾಣಿಕೆಗಳನ್ನು ನೀಡಿದರು. ಪ್ರಕಾಶ್ ಹೊಳ್ಳ ಸ್ವಾಗತಿಸಿ, ವಂದಿಸಿದರು. ಧಾರ್ಮಿಕ ಮುಂದಾಳು ದಿನಕರ ಬಿ.ಎಂ. ಹೊಸಂಗಡಿ ನಿರೂಪಿಸಿದರು. ಬಳಿಕ ರಾಗಸುಧಾದ ವಿದ್ಯಾರ್ಥಿಗಳಿಂದ ಸಂಗೀತ ನಮನ, ಮುಡಿಪಿನ ರಾಮಾರ್ಪಣಾ ತಂಡದವರಿಂದ ಮಂಗಳ ಭಜನೆ ನಡೆಯಿತು. ಬೆಳಿಗ್ಗೆ ರಾಜೇಶ್ ಕೆ.ವಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ರಾಗಾರ್ಪಣಂ ಗಾಯನ ಕಾರ್ಯಕ್ರಮ ನಡೆಯಿತು. ಮುರಳೀಕೃಷ್ಣ ಕುಕ್ಕಿಲ(ಮೃದಂಗ), ಜ್ಯೋತಿಲಕ್ಷ್ಮೀ ಅಮೈ(ವಯಲಿನ್)ನಲ್ಲಿ ಸಹಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries