ಸಮರಸ ಚಿತ್ರಸುದ್ದಿ: ಪೆರ್ಲ: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಉಕ್ಕಿನಡ್ಕಾಸ್ ಆಯುರ್ವೇದ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗಾಗಿ ಪೆರ್ಲ ಶ್ರೀ ಭಾರತೀ ಸದನದಲ್ಲಿ ನಡೆದ ಉಚಿತ ಯೋಗ ಸಪ್ತಾಹ ಶಿಬಿರದ ಅಂಗವಾಗಿ ಯೋಗ ಕಾರ್ಯಕ್ರಮ ಜರುಗಿತು. ಡಾ.ಸ್ವಪ್ನಾ ಜಿ. ಉಕ್ಕಿನಡ್ಕ ಹಾಗೂ ಯೋಗ ತಜ್ಞೆ ದಿವ್ಯಾ ಶರ್ಮ ಪಳ್ಳತ್ತಡ್ಕ ನೇತೃತ್ವ ವಹಿಸಿದ್ದರು.





