ಮಂಜೇಶ್ವರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಘಟನೆ ವತಿಯಿಂದ ಪ್ರತಾಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ನೇಹ ಭವನ ಯೋಜನೆಯ ಮನೆಯ ದಾರಂದ ಮುಹೂರ್ತ ನಡೆಯಿತು. ಉಪ್ಪಳ ಐಲ ಶ್ರೀ ಶಾರದಾ ಭೋವಿ ಎಯುಪಿ ಶಾಲೆ ವಿದ್ಯಾರ್ಥಿನಿ ಶಮಿಕಾ ಕುಟುಂಬಕ್ಕಾಗಿ ಮನೆ ನಿರ್ಮಾಣಗೊಳ್ಳಲಿದೆ.
ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಗಣೇಶ್, ರಾಜ್ಯ ಸಂಚಾಲಕಿ ಆಶಾಲತಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ನಾರಾಯಣ ಭಟ್, ಶಿವಪ್ರಸಾದ್ ಚೆರುಗೋಳಿ, ಸಾಮಾಜಿಕ ಕಾರ್ಯಕರ್ತ ವಸಂತ ಮಯ್ಯ, ಗಣೇಶ್ ಉಪಸ್ಥಿತರಿದ್ದರು.





