HEALTH TIPS

ಬಹುಪಾಲು ವಿದ್ಯಾರ್ಥಿ ಯುವ ಸಂಘಟನೆಗಳ ಬಹುತೇಕ ವಿದ್ಯಾರ್ಥಿಗಳೂ ಕುಡುಕರು: ಅವರಲ್ಲಿ ಜಾಗೃತಿ ಮೂಡಿಸುವ ತುರ್ತು ಇಂದಿದೆ: ಸಚಿವ ಎಂ.ವಿ.ಗೋವಿಂದನ್

                    ತಿರುವನಂತಪುರ: ರಾಜ್ಯದ ವಿದ್ಯಾರ್ಥಿ ಯುವ ಸಂಘಟನೆಗಳ ದೊಡ್ಡ ಭಾಗ ಮದ್ಯವ್ಯಸನಿಗಳು ಎಂದು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಹೇಳಿದ್ದಾರೆ. ಹೈಯರ್ ಸೆಕೆಂಡರಿ ಹಂತದಿಂದಲೇ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವಂತೆ ಸಚಿವರು ಸಲಹೆ ನೀಡಿರುವರು.

                     ನಿನ್ನೆ ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ತಿರುವನಂತಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಸ್ಥಿತಿಯಲ್ಲಿ ಬಾಲ್ಯ ದಾಟುವುದು ಇಂದು ಸುಲಭವಲ್ಲ. ಜಾಗೃತಿ ಮೂಡಿಸಲು ಎಷ್ಟು ಸಮಯ ಬೇಕು? ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ನಡೆಸಲು ಸಾಧ್ಯವಾಗಬೇಕು ಎಂದು ಸಚಿವರು ಸೂಚಿಸಿದರು.

                 ಹೊಸ ತಲೆಮಾರು ಆತ್ಮವಂಚನೆ ರಹಿತವಾಗಿ ಪ್ರಾಮಾಣಿಕತೆಯಿಂದ ಶಿಕ್ಷಣ ಪಡೆಯುವಂತಾಗಬೇಕು ಎಂದು ಸಚಿವರು ಹೇಳಿದರು. ಜಾಗೃತಿ ಮೂಡಿಸಲು ವಿದ್ಯಾರ್ಥಿ-ಯುವ ಸಂಘಟನೆಗಳನ್ನು ಅವಲಂಬಿಸಬಹುದು. ಸೂಕ್ಷ್ಮವಾಗಿ ಗಮನಿಸಿದರೆ ಅವರಲ್ಲಿ ಉತ್ತಮ ಸಂಖ್ಯೆಯು ಮದ್ಯವ್ಯಸನಿಗಳಾಗಿರುವುದು ಕಂಡುಬರುತ್ತದೆ. ಅವರನ್ನು ಬಳಸಿಕೊಂಡು ಜಾಗೃತಿ ಮೂಡಿಸುವುದು ಹೇಗೆ ಎಂದು ಸಚಿವರು ಪ್ರಶ್ನಿಸಿದರು.

                  ಕೇರಳ ಡ್ರಗ್ಸ್ ಹಬ್ ಆಗುತ್ತಿದೆ ಎಂದರು. ಕೇರಳದಲ್ಲಿ ಮೊನ್ನೆ ಬೋಟ್ ಒಂದರಿಂದ 1500 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕೇರಳದ ಹೊರತಾಗಿ, ಸಮುದ್ರದ ಮೂಲಕ ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಡ್ರಗ್ಸ್ ತಲುಪುತ್ತದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries